ನೆಲದೊಡಲು
ಸಂಪಿಗೆಯ ಕಂಪಿನಲಿ ಕಾಡ್ಗಿಚ್ಚು
ಬುಸುಗುಟ್ಟಿದೆ ಕಾಡಂಚಿನಲಿ
ಮೂಡಲಾರದ ಮೂಕ ದನಿ ಆ ಸಂಪಿಗೆಯಲಿ
ತಡವರಿಸಿ ಆಗಸದಿಂದಿಳಿದ ವರುಣ ಧರೆಗೆ
ಬಾನಂಚಿನ ಮೋಡಗಳ ಮರೆಯಿಂದ
ಆ ಸಂಪಿಗೆ ಮುಖದಲ್ಲಿ ಮಂದಹಾಸ
ಮಳೆ ಬಂದು ಗಳಿಗೆಕಳೆಯೊ ಹೊತ್ತಿಗೆ
ರವಿ ಕಿರಣ ಮೈದಡವಿ ಮುತ್ತಿಡುತ್ತಿತ್ತು
ಮೈನೆವರಿ ನೆಟ್ಟಗೆ ನಿಂತಿರೊ ಮರಗಳಿಗೆ
ಹರಿಯುತ್ತಿದೆ ಬೆಟ್ಟದ ತುತ್ತ ತುದಿಯಿಂದ
ಝರಿ ಪೊಟರೆಗಳಲ್ಲಿ ನೀರು
ನೆಯುತ್ತಿವೆ ಮರಗಿಡಗಳಡಿಯಲ್ಲಿ ಮರಿಹುಳು
ತುಂಬಿದ ಝರಿ ತೊರೆಗಳಲ್ಲಿ ತನ್ನದೆ
ಬಿಂಬವ ನೋಡುತ್ತ ನಿಬ್ಬೆರಗಾಗಿ
ನಿಂತಿವೆ ಆ ಮರಗಿಡಗಳು
–ಕಿರಣ್ ಕುಮಾರ್.