ಪರಿಸರ ಸಂರಕ್ಷಣೆ
ಹಸಿರಲಿ ಉಸಿರಿದೆ ನೋಡಾ
ಕಡಿಯಬೇಡವೋ ಕಾಡು ಮೇಡಾ
ತಿಳಿದು ಬದುಕೋ ಹೇ ಮೂಢಾ
ಕುಸಿದಿದೆ ನೋಡು ಅಂತರ್ಜಲ
ಹೇ ಮನುಜ
ಇದು ನಿನ್ನದೇ ಕಾರ್ಯದ ಪ್ರತಿಫಲ
ಮಾಡದಿರು ಮನುಜ ಮರಗಳ ಮಾರಣಹೋಮ
ತಿಳಿದಿರಲಿ ಇದು ನೀನೆ
ಮಾಡಿಕೊಳ್ಳುವ ನಿನ್ನದೇ ಪರೋಕ್ಷ ನಿರ್ನಾಮ
ವಾತಾವರಣದಿ ಅಧಿಕಗೊಂಡಿದೆ ಉಷ್ಣತೆ
ಹೀಗೆಯೇ ಮುಂದುವರಿದರೆ
ಮುಂದಿನ ಪೀಳಿಗೆಗಿಲ್ಲ ಇಲ್ಲಿ ಬದುಕುವ ಸಾಧ್ಯತೆ
ವೃಕ್ಷಗಳ ಕಡಿದರೆ ನಾಶಗೊಂಡಂತೆ ಜನರು
ಹಸಿರಿದ್ದರೆ ನಿನ್ನ ಉಸಿರು
ಉಸಿರಿದ್ದರೆ ಮಾತ್ರ ನಿನ್ನ ಹೆಸರು
ಮೇಲೆಲ್ಲೂ ಇಲ್ಲ ಮನುಜ ಸ್ವರ್ಗವೂ
ಇಲ್ಲೇ ಇಹುದು
ಅದುವೇ ಈ ನಿಸರ್ಗವೂ
ಬೆಳೆಸೋಣ ಪ್ರತಿಯೊಬ್ಬರು ಒಂದೊಂದು ಗಿಡ
ಮಾಡೋಣ ಎಲ್ಲರೂ ಪ್ರಕೃತಿಯ ಸಧೃಡ
ಬದುಕೋಣ ಹಚ್ಚಹಸಿರಿನ ಪ್ರಕೃತಿಯ ಸಂಗ
-ಜನಾರ್ಧನ ಗೊರ್ಟೆ.
ರಾಮನಗರ ಜಿಲ್ಲೆ