ಮಾಸ ವಿಶೇಷ – ಕರಿಜಾಲಿ

ಮಾಸ ವಿಶೇಷ – ಕರಿಜಾಲಿ

© ಅಶ್ವಥ  ಕೆ. ಎನ್ , ಕರಿಜಾಲಿ ಹೂವು,  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Bamoora
ವೈಜ್ಞಾನಿಕ ಹೆಸರು :acacia nilotica subsp. indica

ಕರಿಜಾಲಿಯು ಭಾರತ, ಶ್ರೀಲಂಕಾ ಸೇರಿದಂತೆ ಆಫ್ರಿಕಾದ ಕೆಲ ದೇಶಗಳಲ್ಲಿ ಹರಡಿದೆ. ಮುಟ್ಟಿದರೆ ಮುನಿ ಪ್ರಭೇದಕ್ಕೆ ಸೇರಿರುವ ಈ ಕರಿಜಾಲಿಯು 12 ಮೀಟರ್ ಎತ್ತರಕ್ಕೆ  ಹರಡುವ ದಟ್ಟವಾದ ಪೊದೆ. ಇದರ ಕಾಂಡಗಳು ಮತ್ತು ಕೊಂಬೆಗಳು ಸಾಮಾನ್ಯವಾಗಿ ಕಪ್ಪು ಬಣ್ಣ ಅಥವ ಕಪ್ಪು ಬಿಳಿ ಮಿಶ್ರಿತ ಬಣ್ಣದಿಂದ ಕೂಡಿದೆ. ಇದರ ರೆಂಬೆಗಳಲ್ಲಿ ಮುಳ್ಳುಗಳಿದ್ದು, ಈ ಮುಳ್ಳುಗಳನ್ನು ನಮ್ಮ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಕಿವಿ ಹಾಗೂ ಮೂಗನ್ನು ಚುಚ್ಚಲು ಉಪಯೋಗಿಸುತ್ತಾರೆ. ಇದರ ಒರಟಾದ ತೊಗಟೆಗಳು ಬಿರುಕುಬಿಟ್ಟು ಕೆಂಪುಬಣ್ಣದ ಅಂಟನ್ನು ಒಸರುತ್ತವೆ. ಈ ಅಂಟನ್ನು “ಗಮ್ ಅರೇಬಿಕ್” ಎಂದು, ಭಾರತದಲ್ಲಿ “ಅಮರಾವತಿ ಗಮ್” ಎಂದೂ ಕರೆಯಲಾಗುತ್ತದೆ. ಈ ಪೊದೆಯು ಹೂ ಬಿಟ್ಟಾಗ ದೂರದಿಂದ ಹಳದಿಯ ಚಂಡಂತೆ ಕಾಣುತ್ತದೆ. ಕಾರಣ ಇದರ ಹೂ ಕೂಡ ಹಳದಿ ಬಣ್ಣದ ಗೋಳಾಕಾರದಲ್ಲಿ ಗೊಂಚಲು ಗೊಂಚಲಾಗಿ ಕಾಣಸಿಗುತ್ತದೆ, ಇದರ ಹೂಗಳನ್ನು ಔಷಧಿಗಾಗಿ ಮತ್ತು ಬಣ್ಣ ತಯಾರಿಸಲು ಸಂಗ್ರಹಿಸಲಾಗುತ್ತದೆ. ನೋಡಲು ಹುಣಸೆ ಕಾಯಿಯ ಹಾಗೆ ಜೋಡಿಸಿದಂತೆ ಇರುವ ಇದರ ಬೀಜಗಳು ಗೊಂಚಲಾಗಿ ಜೋತುಬಿದ್ದಿರುತ್ತವೆ. ಇದರ ಕಾಂಡವನ್ನು ದೋಣಿಗಳ ತಯಾರಿಕೆಗೆ ಬಳಸಲಾಗುತ್ತದೆ.

Spread the love
error: Content is protected.