ಇರುಳ ಮಂಥನ

ಇರುಳ ಮಂಥನ
ಇದು ಇರುಳ ಮಂಥನ

ಚಂದ್ರ ನಿಲ್ಲದ ರಾತ್ರಿಯೊಳು
ತಾರೆ ಕಾಣದ ನಗರದೊಳು
ಕತ್ತಲಲ್ಲಿದ ಇರುಳಿನೊಳು

ಇರುಳ ಮಂಥನ
ಇದು ಇರುಳ ಮಂಥನ
ಗದ್ದಲದ ಗೂಡಿನೊಳು
ಪ್ರಗತಿಯ ಪಥದೊಳು
ಋತುವಿಲ್ಲದ ಇರುಳೊಳು

ಇರುಳ ಮಂಥನ
ಇದು ಇರುಳ ಮಂಥನ

ಕಡಲ ತೀರದೊಳು
ಕಾನನದ ಕಣಿವೆಯೊಳು
ಜೀವ ವೈವಿಧ್ಯದೊಳು

ಇರುಳ ಮಂಥನ
ಇದು ಇರುಳ… ಮಂಥನ…!

–  ಕೃಷ್ಣನಾಯಕ್
ರಾಮನಗರ ಜಿಲ್ಲೆ

Spread the love
error: Content is protected.