ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

©ಅರವಿಂದ ರಂಗನಾಥ್, ಮುಂಜಾನೆ

ಮುಂಜಾನೆಯ ತಿಳಿಬೆಳಕಲಿ ದಟ್ಟಡವಿಯ ನಡುವೆ ಹಾದು ಹೋಗುವ ಈ ರಸ್ತೆಯಲ್ಲಿ ಸಾಗುವುದು ಬಲು ಸೊಬಗು. ಈ ಸೊಬಗು ಸದಾಕಾಲ ಎಲ್ಲರಿಗೂ ಸಿಗಲು ಹಾಳುಮಾಡದೆ ಇಂತಹ ಪ್ರದೇಶಗಳನ್ನು ಉಳಿಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ, ಕಾಂಕ್ರೀಟೀಕರಣ ಇನ್ನು ಮುಂತಾದವುಗಳಿಂದಾಗಿ ಈ ಬಗೆಯ ಸೊಬಗನ್ನು ಕಳೆದುಕೊಳ್ಳುತ್ತಿದ್ದೇವೆ.

                                                           © ಅರವಿಂದ ರಂಗನಾಥ್, ಜಲಪಾತ

ಕಣ್ ಸೆಳೆಯುವ ಈ ದೃಶ್ಯವನ್ನು ಎಷ್ಟು ನೋಡಿದರೂ ಸಾಲದು. ದಟ್ಟಡವಿಗಳಲ್ಲಿ ದೂರದವರೆಗೂ ಜುಳು ಜುಳು ಸಪ್ಪಳ ಮಾಡುವ ಸುಂದರ ಜಲಪಾತಗಳಲ್ಲಿದೊಂದು. ಮಾನವನ ಕಣ್ ಸೆಳೆಯುವುದಲ್ಲದೆ ಸಾವಿರಾರು ಜೀವರಾಶಿಗಳಿಗೆ ಆಧಾರವಾಗಿದೆ. ನಾವು ಕಂಡ ಎಲ್ಲಾ ಜಲಪಾತಗಳನ್ನು ಪ್ರವಾಸಿತಾಣ ಮಾಡುವುದರಿಂದ ಅಲ್ಲಿನ ಎಷ್ಟೋ ಜೀವಿಗಳ ಸಂತತಿಯೇ ನಶಿಸಿಹೋಗುತ್ತಿವೆ.

                                           © ಅರವಿಂದ ರಂಗನಾಥ್, ಅಡವಿಯಲೊಂದು ಮನೆ 

ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆಗೆ ಹೂಲುವಂತೆ, ಮಾನವನಿಲ್ಲದ ಸ್ಥಳವಿಲ್ಲ, ಎಲ್ಲಿ ಹೋದರೂ ತನಗಾಗಿಯೆಂದು ನೆಲೆಗಿಟ್ಟಿಸಿಕೊಳ್ಳುತ್ತಾನೆ. ಸುತ್ತಲಿನ ಹಚ್ಚ ಹಸಿರಿನ ನಡುವೆ ಚಿಲಿಪಿಲಿ ಹಕ್ಕಿಗಳ ಜೊತೆಗೆ ಇರಲು ಯಾರಿಗಿಷ್ಟವಿಲ್ಲ ಹೇಳಿ, ನನಗೂ ಸಹ ಇಷ್ಟ. ಆದರೆ ಪರಿಸರದಲ್ಲಿ ಉಳಿದ ಜೀವಿಗಳಂತೆ ನಾನು ಒಂದು ಜೀವಿ ,ನನ್ನ ಹಾಗೆ ಅವುಗಳೂ ಕೂಡ ಎಲ್ಲಿಬೇಕಾದರು ನೆಲೆಸಬಹುದು. ಆದರೆ ಮಾನವನ ಅತಿಯಾದ ಆಸೆಯಿಂದಾಗಿ ತನ್ನಿಂದಲೇ ಎಲ್ಲ ಎಂದು ತಿಳಿದಿದ್ದಾನೆ. ಪ್ರಕೃತಿಯ ಸಮತೋಲನವನ್ನು ಏರುಪೇರು ಮಾಡುತ್ತಿದ್ದಾನೆ.

                                            © ಅರವಿಂದ ರಂಗನಾಥ್, ಶೋಲ  ಹುಲ್ಲುಗಾವಲು 

ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಈ ಪ್ರದೇಶವು ನುಣ್ಣಗೆ ಕಂಡರೂ ಅದರ ಬಳಿಗೆ ಹೋದಾಗಲೇ ಆ ಪ್ರದೇಶದ ಮಹತ್ವ ತಿಳಿಯಲು ಸಾಧ್ಯ. ಎಲ್ಲಾ ಪ್ರದೇಶಗಳ ಹಾಗೆಯೇ ಈ ಪ್ರದೇಶವು ಕೂಡ ತನ್ನದೇ ಆದ ವಿಶಿಷ್ಟ ಜೀವವೈವಿಧ್ಯತೆಯನ್ನು ಹೊಂದಿದೆ. ಹುಲ್ಲು, ತಂತು ಬೇರುಳ್ಳ ಏಕದಳ ಸಸ್ಯವಾಗಿರುವುದರಿಂದ ಮಣ್ಣಿನ ಸವಕಳಿ ಕಡಿಮೆಯಾಗಿರುತ್ತದೆ. ಸುರಿದ ಮಳೆಯನ್ನು ಬೇಗ ಹರಿಯಲು ಬಿಡದೆ ನೀರನ್ನು ತನ್ನ ಜಾಗದಲ್ಲೆ ಇಂಗಿಸುತ್ತ ಬಹಳ ದಿನಗಳವರೆಗೆ ತೇವಾಂಶದಿಂದ ಕೂಡಿರುತ್ತದೆ.

ಚಿತ್ರಗಳು: ಅರವಿಂದ ರಂಗನಾಥ್
ವಿವರಣೆ: ಧನರಾಜ್ ಎಂ

Spread the love
error: Content is protected.