ಮಾಸ ವಿಶೇಷ – ರಾಮತನ ಚಂಪಕ
© ಡಬ್ಲ್ಯೂ ಸಿ ಜಿ, ರಾಮತನ ಚಂಪಕ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Golden champak or Mickey Mouse Plant
ವೈಜ್ಞಾನಿಕ ಹೆಸರು: Ochna obtusata
ಬೆಂಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಶುಷ್ಕಎಲೆ ಉದುರುವ ಕಾಡು ಕಲ್ಲು ಬಂಡೆಗಳ ಆವಾಸಗಳಲ್ಲಿ ಸುಮಾರು 12 ಮೀಟರ್ ಎತ್ತರಕ್ಕೆ ಬೆಳೆಯುವ ಸಣ್ಣ ಮರರಾಮತನ ಚಂಪಕ. ಇದು ಸುಂದರವಾದ ಹಳದಿ ಹೂಗಳನ್ನು ಬಿಡುತ್ತದೆ. ಗಾಡ ಕಪ್ಪು ಕಾಯಿಗಳನ್ನು, ಹೊಳೆಯುವ ಎಲೆಗಳನ್ನು ಹೊಂದಿದೆ. ಕೆಂಪು ಬಣ್ಣದ ಬೀಜದ ಬಟ್ಟಲಿನಲ್ಲಿ ಇರುವ ಕಪ್ಪು ಬೀಜವು ನೋಡಲು ಮಿಕ್ಕಿ ಮೌಸ್ ಮುಖವನ್ನುಓಲುತ್ತದೆ. ಬೀಜದಿಂದ ಮೊಳಕೆಯೊಡೆದ ಗಿಡ ಬಹು ಬೇಗ ಬೆಳೆಯುತ್ತದೆ. ಇದನ್ನು ನಾಟಿ ವೈದ್ಯರು ಔಷಧಿಯಾಗಿ ತಯಾರಿಸಲು ಬಳಸುತ್ತಾರೆ.