ಪ್ರಕೃತಿ ಬಿಂಬ

©ಅರವಿಂದ ರಂಗನಾಥ್
ನೋಡುವ ಕಣ್ಣುಳ್ಳ ಮನಕೆ ಈ ಜಗವೇ ಸೋಬಗು! .ಸ್ವರ್ಗವೇ ಭೂಮಿಗೆ ಇಳಿದಂತಹ ಕಾಮನಬಿಲ್ಲಿನ ಬಣ್ಣದ ನಿಸರ್ಗ ಕಲಾಕೃತಿ ಈ ಕಾಡು . ಮಾನವ ಪ್ರಕೃತಿ ಯನ್ನು ಅದರ ಪಾಡಿಗೆ ಅದನ್ನು ಬಿಟ್ಟರೆ, ಅಲ್ಲೇ ಒಂದು ಅದ್ಭುತ ಕಲಾಕೃತಿ ತಯಾರಾಗುತ್ತದೆ. ಆಧುನಿಕ ಯುಗದಲ್ಲಿ ಮಾನವರಾದ ನಮ್ಮ ದುರಾಸೆಗೆ ಹರಿಯುವ ಝರಿ, ಹೊಂಬಣ್ಣದ ಮರ, ಖಗ ಮೃಗಗಳೆಲ್ಲ ಮಾಯವಾಗುತ್ತಿರುದು ದುರಂತ!

©ಅರವಿಂದ ರಂಗನಾಥ್
ನೀರು ಜೀವಿಗಳ ಜೀವ. ಈ ಭೂಮಿಯ ಮೇಲೆ ಮೋಡವಾಗಿ, ಹನಿಯಾಗಿ,ಝರಿಯಾಗಿ ಸರೋವರವಾಗಿ,ಸಾಗರವಾಗಿ, ಕೊರೆಯುವ ನೀರ್ಗಲ್ ಆಗಿ ಎಲ್ಲ ಭೌತಸ್ಥಿತಿಯಲ್ಲೂ ನೀರು ಇದೆ. ನೀರಿಲ್ಲದೆ ನಮಗೂ ಇತರೆ ಪ್ರಾಣಿಗಳಿಗು ಆಹಾರ ದೊರಕದು. ನಮ್ಮ ನಾಗರೀಕತೆಗಳು ಬೆಳೆದಿದ್ದು ಅಳಿದಿದ್ದು ನೀರಿನಿಂದಲೇ ಎಂದು ಇತಿಹಾಸ ಸಾರಿ ಸಾರಿ ಹೇಳುತ್ತಿದೆ. ಅದರೂ ನಾವು ನಮ್ಮ ಕೊಳೆ ಕಸವನ್ನು ಶುದ್ದ ನೀರಿನ ಮೂಲಗಳಾದ ಕೆರೆ, ಹೊಳೆ, ನದಿ, ಸಮುದ್ರಕ್ಕೆ ಎಗ್ಗಿಲ್ಲದೆ ಸುರಿದು ಕಲುಷಿತ ಗೊಳಿಸುತ್ತಿರುವುದನ್ನು ಕಂಡಾಗ ಇತಿಹಾಸದಿಂದ ನಾವು ಬುದ್ಧಿ ಕಲಿತಂತೆ ಕಾಣದು!

©ವಿಪಿನ್ ಬಾಳಿಗಾ, ಗ್ಲಾನ್ಡ್ಯೂಲಾರ್ ಬುಷ್ ಫ್ರಾಗ್
ನಾನು ಪೊದೆಗಪ್ಪೆ. ಕರ್ನಾಟಕ ಮತ್ತು ಕೇರಳದ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡೇ ನನ್ನ ಆವಾಸ ಸ್ಥಾನ. ಒಂದು ಇಂಚು ಉದ್ದವಿತವ ನಾನು ಎತ್ತರದ ಪೊದೆಗಳಲ್ಲಿ, ಕಾಫಿತೋಟದ ಪೊದೆಗಳ ಮೇಲೆ ವಾಸಿಸುತ್ತೇನೆ. ನನ್ನ ಮೈ ಮೇಲೆ ಒರಟಾದ ಸಣ್ಣ ಸಣ್ಣ ಘಂತಿಗಳಿವೆ. ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಇಲ್ಲಿ ಈಗ ಮಳೆಯೇ ಸರಿಯಾಗಿ ಬರುತ್ತಿಲ್ಲ. ಅದರಲ್ಲಿ ಬೆಳೆಗಳ ರಕ್ಷಣೆಗೆ ಮಾನವರು ಬಳಸುತ್ತಿರುವ ಕೀಟನಾಷಕಗಳು ನಮ್ಮ ಜೀವವನ್ನೂ ತೆಗೆಯುತ್ತಿವೆ. ನಾನು ಅವನತಿಯ ಅಂಚಿನಲ್ಲೇ ಜೀವ ಹಿಡಿದು ಬದುಕುತ್ತಿದ್ದೇನೆ.