ಛಾಯೆಯ ಮಾಯೆ ಎಂದೇ . .

ಕಪ್ಪು ಕತ್ತಲೆಯ ನೀಲಾಕಾಶವೆಂದೇ
ಹೊಳೆವ ಕಾಯವ ನಕ್ಷತ್ರವೆಂದೇ
ಮಿನುಗುವ ತಾರೆಯ ಕಣವೆಂದೇ
ವಿಶ್ವ ಛಾಯೆಯ ಮಾಯೆಯೆಂದೇ

ರವಿಯೇ ಸರ್ವಶಕ್ತನೆಂದೇ
ಅಂತರಿಕ್ಷವೇ ವಿಶಾಲವೆಂದೇ
ಜ್ಯೋತಿರ್ವರ್ಷಗಳೇ ಸಮೀಪವೆಂದೇ
ಮಹಾ ಛಾಯೆಯೊಳು ಎಲ್ಲವೂ ಮಾಯೆಯೆಂದೇ

ಅದೃಶ್ಯಯದ ಛಾಯೆಯ ಮಾಯೆಯೆಂದೇ
ವಸುಂದರೆಯ ಛಾಯೆಯ ಇರುಳೆಂದೇ
ಮನುಕುಲಕೆ ಛಾಯೆಯೇ ವಿಶ್ಮಯವೆಂದೇ
ಗ್ರಹಣಗೋಚರವ ಮಾಯಾ ಛಾಯವೆಂದೇ

ಚಂದ್ರ ಛಾಯೆಯ ಕಾಳರಾತ್ರಿಯಂದೇ
ನಕ್ಷತ್ರ ಪುಂಜಕೆ ಕಪ್ಪುರಂಧವ ಛಾಯೆಯೆಂದೇ
ವಿಶ್ವದ ರಮ್ಯತೆ ಸೌಮ್ಯತೆಗೆ ಮಹಾಛಾಯೆಯೆಂದೇ
ಛಾಯೆಯ ಮಾಯೆಯೊಳಗೆಕಾಂತೆ ಶಕ್ತಿಯ ಸಮಗಮವೆಂದೇ

-ಕೃಷ್ಣ ನಾಯಕ್
ರಾಮನಗರ ಜಿಲ್ಲೆ

Print Friendly, PDF & Email
Spread the love
error: Content is protected.