ನೀವೂ ಕಾನನಕ್ಕೆ ಬರೆಯಬಹುದು
ಧರೆಯ ಜೀವ ದ್ರವ ಎಂದರೆ ನೀರು. ಭೂಮಿಯ ಮೇಲ್ಮೈನ ಶೇಕಡ ಎಪ್ಪತ್ತೊಂದು ಭಾಗವನ್ನು ಆವರಿಸಿ, ಇಡೀ ಧರೆಗೆ ಸುಂದರ ನೀಲವರ್ಣ ನೀಡಿರುವ ಈ ದ್ರವ್ಯವು ಭೂಮಿಯನ್ನು ಜೀವಲೋಕವಾಗಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ಪಡೆದಿದೆ. ದ್ಯುತಿಸಂಶ್ಲೇಷಣೆಯ ಮೂಲಕ ಸಸ್ಯಗಳು ತಮ್ಮ ಆಹಾರವನ್ನು ತಯಾರಿಸುತ್ತವೆ. ನೀರು ಈ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ವಿವಿಧ ರೀತಿಯ ಮೀನುಗಳು, ಆಮೆಗಳು, ಕಪ್ಪೆಗಳು, ಏಡಿಗಳು ಮತ್ತು ಇತರ ಜೀವಿಗಳಿಗೆ ನೀರು ವಾಸ ಸ್ಥಳವಾಗಿದೆ. ಜೀವಿಗಳ ಉಳಿವಿಗೆ ನೀರು ಮುಖ್ಯವಾಗಿದೆ. ನೀರನ್ನು ನೈಸರ್ಗಿಕವಾಗಿ ಮರುಬಳಕೆ ಮಾಡಿದರೂ ಸಹ, ಭೂಮಿಯ ಮೇಲಿನ ಕುಡಿಯುವ ನೀರಿನ ಪ್ರಮಾಣವು ವೇಗವಾಗಿ ಕಡಿಮೆಯಾಗುತ್ತಿದೆ. ನೀರಿನ ಸಂರಕ್ಷಣೆಗಾಗಿ ಹಾಗೂ ನೀರಿನ ಪ್ರಾಮುಖ್ಯತೆಯನ್ನು ಅರಿವು ಮೂಡಿಸುವ ಸಲುವಾಗಿ ಡಿಸೆಂಬರ್ 1992ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ A/RES/47/193 ನಿರ್ಣಯವನ್ನು ಅಂಗೀಕರಿಸಿತು, ಅದರ ಮೂಲಕ ಪ್ರತಿ ವರ್ಷ 22 ಮಾರ್ಚ್ ಅನ್ನು “ವಿಶ್ವ ನೀರಿನ ದಿನ” ವೆಂದು ಘೋಷಿಸಲಾಯಿತು. ನೀರಿನ ಬಗ್ಗೆ ಇನ್ನೂ ಹೆಚ್ಚು ಆಸಕ್ತಿದಾಯಕ ಸಂಗತಿಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ನೀವು ಕಾನನಕ್ಕೆ ಲೇಖನಗಳನ್ನು ಬರೆಯಬಹುದು.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆ ಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.



