ವನಬಂಧ-11
ಎಡದಿಂದ ಬಲಕ್ಕೆ:
- ಶಿಖರವೇರಿದರೂ ಸಹ ಬೇಟೆಯಾಡುವುದೇ ಪರಮಗುರಿ (3)
- ಜೇನುಗಳ ಒಡತಿ ಇಲ್ಲಿ ಬೆನ್ನು ತೋರಿ ಕುಳಿತಿದ್ದಾಳೆ (4)
- ಕಾಡಿನ ಅತೀ ನಿರ್ದಯಿ ಬೇಟೆಗಾರ ಪ್ರಾಣಿ ಆದರೆ ಕೆಂಪಗಿಲ್ಲ (3)
- ಈ ಹಂಸ ಬಹುಶಃ ರಾಜರ ವಂಶಕ್ಕೆ ಸೇರಿದ್ದಾಗಿರಬಹುದೇ? (4)
- ಸುಡು ಬಿಸಿಲು ಅಥವಾ ಬೆಂಕಿಯ ಸನಿಹದಲ್ಲಿ ಅನುಭವಕ್ಕೆ ಬರುವ ಬಿಸಿ (2)
- ಕೊಕ್ಕಿನಿಂದ ಬೇಟೆಯಾಡುವ ಈ ಪಕ್ಷಿಜಾತಿ, ದಾರಿಯಲ್ಲಿ ಸಿಕ್ಕರೆ? (3)
- ಜೇನು ಹುಳಗಳು ಹೂವಿನಲ್ಲಿ ಅರಸುವ ಸಿಹಿ (4)
- ಶ್ರೀ ತೇಜಸ್ವಿ ಅವರ ಅನುವಾದದ ಕಾಡಿನ ಕಥೆಗಳು ಸರಣಿಯ ಪ್ರಮುಖ ಪಾತ್ರಧಾರಿ (5)
ಮೇಲಿನಿಂದ ಕೆಳಕ್ಕೆ:
- ಶಿಕಾರಿಗೆ ಹೊರಟಿದೆ ಈ ಚಂದದ ಬೇಟೆಗಾರ ಪಕ್ಷಿ (3)
- ಗರಿಗರಿಯಾಗಿರದಿದ್ದರೂ ಈ ಹುಲ್ಲು ಮಾತ್ರ ಗಣಪನಿಗೆ ಬಲು ಪ್ರೀತಿ (3)
- ಹಾರದೊಂದಿಗೆ ಬರುವ ಇನ್ನೊಂದು ವಸ್ತು ನವಿಲಿನ ತಲೆಯಲ್ಲಿ ಕಂಡು ಬರುತ್ತದೆ (3)
- ವಸುಂಧರೆಯೂ ಹೌದು ಆದರೆ ಎರಡು ಅಕ್ಷರಗಳು ಅಷ್ಟೇ (2)
- ತೆಂಗಿನಕಾಯಿ ಒಣಗಿಸಿಡಿ ಎಂದರೆ ಕೊಬ್ಬು ಎನ್ನುತ್ತಿದ್ದಾರೆ (3)
- ಕಾಡಿನ ನೆಲದಲ್ಲಿ ಉದುರುವ ಈ ಒಣಗಿದ ಎಲೆಗಳು ಬೇಟೆಗಾರರ ಬಗ್ಗೆಯೂ ಎಚ್ಚರಿಸುತ್ತವೆ (4)
- ಕಮ್ಮಾರ ಏನನ್ನೋ ಮೆಲುಕು ಹಾಕುತ್ತಾ ಇಲ್ಲಿ ಕಬ್ಬಿಣ ಕಾಯಿಸುತ್ತಾನೆ (3)
- ಕಪ್ಪು ಬಣ್ಣದ ವಟಗುಟ್ಟುವ ಮಂಡೂಕ (2)
ವನಬಂಧ – 09ರ ಉತ್ತರಗಳು
ಎಡದಿಂದ ಬಲಕ್ಕೆ
1. ಹೆಬ್ಬಾವು 2. ಚಿಲಿಪಿಲಿ 3. ತರಕಾರಿ 4. ಪಾರಿವಾಳ 5. ದ್ವಿದಳ 6. ಗೊರವಂಕ 7. ಮಕರಂದ 8. ನರಭಕ್ಷಕ
ಮೇಲಿನಿಂದ ಕೆಳಕ್ಕೆ
1. ಹೆಬ್ಬುಲಿ 2. ಮಾವುತ 3. ಗರಿ 4. ಪಾರದರ್ಶಕ 5. ಪರಿಮಳ 6. ಗೊಬ್ಬರ 7. ಕದನ 8. ಕಪ್ಪೆ
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 30ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”
– ಸುಬ್ಬು ಬಾದಲ್
ಬೆಂಗಳೂರು ಜಿಲ್ಲೆ
