ನವಿಲೇ ನವಿಲೇ
ನವಿಲೇ ನವಿಲೇ
ಬಣ್ಣದ ನವಿಲೇ
ಹಣ್ಣನು ಕೊಡಲೆ
ಬಣ್ಣದ ನವಿಲೇ
ಗರಿಯನು ಬಿಚ್ಚಿ
ಕುಣಿಯುವ ನವಿಲೇ
ಎಲ್ಲರ ಕಣ್ಮನ
ತಣಿಸುವ ನವಿಲೇ
ನಮ್ಮ ರಾಷ್ಟ್ರದ
ಪಕ್ಷಿಯೇ ನವಿಲೇ
ಕಾಡಲಿ ಇರುವ
ಸುಂದರ ನವಿಲೇ
ಬಣ್ಣ ಬಣ್ಣದ
ಅಂದದ ನವಿಲೇ
ನೀನು ಇರುವೇ
ಮರದ ಮೇಲೆ
– ಗಾಯನಾ ಲಕ್ಷ್ಮಣ ಮೊಗೇರ
5 ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಗೊರ್ಟೆ
ಭಟ್ಕಳ (ತಾ) ಉತ್ತರ ಕನ್ನಡ ಜಿಲ್ಲೆ