ಹನಿಗಳ ಹಾಡು

ಹನಿಗಳ ಹಾಡು

ಹನಿಯ ನೀರ ಹನಿಗಳು
ಸೇರಿ ಹರಿವ ಹಾದಿಯಲಿ
ಹಸಿರ ದೀಪವು
ನಿತ್ಯ ದೀಪಾವಳಿ

ರೂಪ ಬದಲಿಸಿ
ಬೆಳೆವ ಜೀವಗಳ
ನೂರು ಮೊಗಗಳ
ಬದುಕ ಚಿತ್ರಾವಳಿ

ಹರಿವ ಜೊತೆ
ಬಳುಕುವ ಸಸಿಗಳ
ಮೈಯ ಮಾಟಕೆ
ನಿನಾದ ವಿನೋದಾವಳಿ

ಮುತ್ತಂತೆ ಹೊಳೆವ
ಜಲದೊಳಗಿನ ಕಲ್ಲುಗಳಲಿ
ವಿವಿಧ ರೂಪಗಳ
ನಿತ್ಯ ನಾಮಾವಳಿ

ಪುಟ್ಟ ದೋಣಿ
ಹರಿವ ಹಾದಿಯಲಿ
ಕಾಣದ ಗುರಿಯೆಡೆಗೆ
ಬೀಸಿದಂತೆ ತಂಗಾಳಿ…

– ನಿರಂಜನ ಕೆ. ನಾಯಕ
           ದಕ್ಷಿಣ ಕನ್ನಡ ಜಿಲ್ಲೆ

Spread the love
error: Content is protected.