ಹನಿಗಳ ಹಾಡು

ಹನಿಯ ನೀರ ಹನಿಗಳು
ಸೇರಿ ಹರಿವ ಹಾದಿಯಲಿ
ಹಸಿರ ದೀಪವು
ನಿತ್ಯ ದೀಪಾವಳಿ
ರೂಪ ಬದಲಿಸಿ
ಬೆಳೆವ ಜೀವಗಳು
ನೂರು ಮೊಗಗಳು
ಬದುಕಿ ಚಿತ್ರಾವಳಿ
ಹರಿವ ಜೊತೆ
ಬಳುಕುವ ಸಸಿಗಳ
ಮೈಯ ಮಾತಕೆ
ನಿನಾದ ವಿನೋದಾವಳಿ
ಮುತ್ತಂತೆ ಹೊಳೆವ
ಜಲದೊಳಗಿನ ಕಲ್ಲುಗಳಲಿ
ವಿವಿಧ ರೂಪಗಳು
ನಿತ್ಯ ನಾಮಾವಳಿ
ಪುಟ್ಟ ದೋಣಿ
ಹರಿವ ಹಾದಿಯಲಿ
ಕಾಣದ ಗುರಿಯೆಡೆಗೆ
ಬಿಸಿದಂತೆ ತಂಗಾಳಿ…
– ನಿರಂಜನ ಕೆ. ನಾಯಕ
ದಕ್ಷಿಣ ಕನ್ನಡ ಜಿಲ್ಲೆ