ಆಧುನೀಕತೆಯ ಅವತರಣಿಕೆ..
ಋತುಗಳೊಡನೆ
ಯುಗಗಳೊಡನೆ
ಅಗೋಚರಗಳೊಡನೆ
ವಿಸ್ಮಯಗಳೊಡನೆ
ಅರುಣೋದಯ ಚಂದ್ರೋದಯಗಳೊಡನೆ…!
ಕಾಂತರೂಪಗಳೊಡನೆ
ಕಪ್ಪು ರಂಧ್ರ ತಾರಾಪುಂಜಗಳೊಡನೆ
ನದಿ ಕಣಿವೆಗಳೊಡನೆ
ಸಾಗರದ ಅಲೆಗಳೊಡನೆ
ಅಗಣಿತ ಭೌತಜಡಗಳೊಡನೆ….!
ಜೀವಧಾತುಗಳೊಡನೆ
ಜೀವ ಸಂಕುಲಗಳೊಡನೆ
ಇಂದ್ರಿಯಗಳ ಗ್ರಹಿಕೆಗಳೊಡನೆ
ಜೀವ ಜಲ, ಜೀವ ಅನಿಲಗಳೊಡನೆ
ಪ್ರಕೃತಿಯ ಸಹಜ ಕ್ರಿಯೆಗಳೊಡನೆ…!
ವಿವೇಚನೆಗಳೊಡನೆ
ಆವಿಷ್ಕಾರಗಳೊಡನೆ
ಮುಗಿಲ ಮೆಟ್ಟಿಲುಗಳೊಡನೆ
ಹಿಮಪಾತ, ಅಗ್ನಿಜ್ವಾಲೆಗಳೊಡನೆ
ಅನಂತರೂಪಶಕ್ತಿ ಸಾಧನಗಳೊಡನೆ…!
ಗೋಚರಿಸುತಿದೆ ಇಂದು
ಆಧುನೀಕತೆಯ ಅವತರಣಿಕೆ?
ಮಲಿನತೆಯ ಕರಿ ನೆರಳೊಳಗೆ…ಈ ವಸುಂಧರೇ…?
– ಕೃಷ್ಣ ನಾಯಕ್.
ರಾಮನಗರ ಜಿಲ್ಲೆ
ಹವ್ಯಾಸಿ ಕವಿ, ಪರಿಸರ ಕಾಳಜಿಯ ಜೊತೆಗೆ ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುತ್ತೇನೆ. ವೃತ್ತಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗ. ಪದವಿ – B.Sc