ಮಾಸ ವಿಶೇಷ – ಅಳಲೆಕಾಯಿ
© ನಾಗೇಶ್ ಓ ಎಸ್, ಅಳಲೆಕಾಯಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು : Black myrobalan
ವೈಜ್ಞಾನಿಕ ಹೆಸರು : Terminalia chebula
ದಕ್ಷಿಣ ಏಷ್ಯಾ ಖಂಡದ ಕೆಲವು ದೇಶಗಳ ಶುಷ್ಕ ಕಾಡಿನಲ್ಲಿ ಕಂಡುಬರುವ ಅಳಲೆಮರ ಸುಮಾರು ಇಪ್ಪತೈದರಿಂದ ಮೂವತ್ತು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಕಾಂಡವು ಕಡು ಬೂದು ಬಣ್ಣದ ತೊಗಟೆಯನ್ನು ಹೊಂದಿದ್ದು ಸುಮಾರು ಒಂದು ಮೀಟರ್ ಸುತ್ತಳತೆಯನ್ನ ಹೊಂದಿರುತ್ತದೆ. ಎಲೆಗಳು ತೊಟ್ಟಿನಲ್ಲಿ ಒಂದಕ್ಕೊಂದು ಅಭಿಮುಖವಾಗಿ ಜೋಡಿಸಲ್ಪಟ್ಟಿರುತ್ತದೆ. ತಿಳಿಬಿಳಿ ಮಿಶ್ರಿತ ಹಸಿರು ಬಣ್ಣದ ಹೂಗಳನ್ನು ಬಿಡುವ ಈ ಮರದಲ್ಲಿ ಗಂಡು ಮತ್ತು ಹೆಣ್ಣು ಹೂ ಪ್ರತ್ಯೇಕವಾಗಿರುತ್ತವೆ. ಹಸಿರುಬಣ್ಣದ ಮೊಟ್ಟೆಯಾಕಾರದ ಸಣ್ಣ ಸಣ್ಣ ಕಾಯಿಗಳನ್ನು ಬಿಡುತ್ತವೆ. ಈ ಕಾಯಿಗಳು ಒಣಗಿದಾಗ ತಿಳಿ ಹಳದಿ ಬಣ್ಣಕ್ಕೆತಿರುಗಿ ಗಟ್ಟಿಯಾಗತ್ತದೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಕಾಯಿಗಳನ್ನ ಕಾಣಬಹುದು. ಈ ಅಳಲೇ ಕಾಯಿಯು ಆಯುರ್ವೇದದಲ್ಲಿ “ಔಷಧಿಗಳ ರಾಜ” ಎಂದೇ ಕರೆಯಲ್ಪಟ್ಟಿದೆ. ಆಯುರ್ವೇದದ ಪ್ರಸಿದ್ಧ ತ್ರಿಫಲ ಚೂರ್ಣದಲ್ಲಿ ಈ ಅಳಲೇ ಕಾಯಿಯನ್ನು ಉಪಯೋಗಿಸುತ್ತಾರೆ.