ಮಾಸ ವಿಶೇಷ -ತೂಪ್ರೆ ಮರ

ಮಾಸ ವಿಶೇಷ -ತೂಪ್ರೆ ಮರ

                         © ನಾಗೇಶ್ ಓ. ಎಸ್. ತೂಪ್ರೆ ಮರ,ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Common Ebony
ವೈಜ್ಞಾನಿಕ ಹೆಸರು : Diospyros melanoxylon

ಭಾರತ ಮತ್ತು ಶ್ರೀಲಂಕಾ ದೇಶಗಳ ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುವ ತೂಪ್ರೆ ಮರವು ಒಂದು ಮಧ್ಯಮ ಗಾತ್ರದ ಮರವಾಗಿದೆ. ಇದು ಸುಮಾರು 15 ರಿಂದ 20 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದು ಸಾಮಾನ್ಯ ಎಲೆ ವಿನ್ಯಾಸವನ್ನು ಹೊಂದಿದ್ದು, ಗಾಢ ಹಸಿರು ಬಣ್ಣದ ಸುಮಾರು 5 ರಿಂದ 10 ಸೆಂಟಿಮೀಟರ್ ಅಗಲವಿರುವ ಎಲೆಗಳನ್ನು ಹೊಂದಿರುತ್ತದೆ. ಮರದ ತೊಗಟೆಯು ಕಪ್ಪು ಮಿಶ್ರಿತ ಮತ್ತು ಬೂದು ಬಣ್ಣವನ್ನು ಹೊಂದಿದ್ದು, ಮರದಲ್ಲಿ ಗಂಡು ಹೂವುಗಳು ನೇರಳೆ ಬಣ್ಣದಲ್ಲಿರುತ್ತವೆ. ಸುಮಾರು 1 ರಿಂದ 1.5 ಸೆಂಟಿಮೀಟರ್ ಉದ್ದವಿರುವ ಬಹುತೇಕ ಹೂವುಗಳು, ಚಿಕ್ಕ ಪುಷ್ಪ ಮಂಜರಿಗಳಂತೆ ಮೂರು ಹೂಗಳಿರುತ್ತವೆ. ಹೆಣ್ಣು ಹೂಗಳು ಗುಂಪು ಗುಂಪಾಗಿ ಅಥವಾ ಒಂಟಿಯಾಗಿ ಕೂಡ ಕಂಡು ಬರುತ್ತವೆ. ಮರದ ಕಾಯಿಗಳು ಗೋಳಾಕಾರದಲ್ಲಿದ್ದು, ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ. ತೂಪುರ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಅತಿಸಾರ ಭೇದಿಗೆ ಟಾನಿಕ್ ಆಗಿ ಬಳಸುತ್ತಾರೆ. ಒಣಗಿದ ಹೂಗಳನ್ನು ಚರ್ಮ ಮತ್ತು ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳ ಔಷಧಿ ತಯಾರಿಕೆಗೆ ಉಪಯೋಗಿಸುತ್ತಾರೆ.

Spread the love
error: Content is protected.