ಮಳೆಗಾಲ
ಬೇಸಿಗೆಯ ಈ ಬಿಸಿಲಲಿ ತಂಪು ತಂಗಾಳಿ ಬೀಸಲಿ
ಬೀಸುವ ತಂಗಾಳಿ ಎಲ್ಲರ ಮನವ ಆವರಿಸಲಿ
ದ್ವೇಷವ ಅಳಿಸಿ ಮನದಿ ಪ್ರೀತಿಯ ಬೆಳೆಸಲಿ
ಮನದ ನೋವ ಸರಿಸಿ ನೆಮ್ಮದಿಯ ಪಸರಿಸಲಿ
ದಣಿದ ದೇಹಕ್ಕೆ ವಿಶ್ರಾಂತಿ ನೀಡಲಿ
ಮಳೆಗಾಲಕ್ಕೆ ಮುನ್ನುಡಿ ಬರೆಯಲಿ
ಇಳೆಗೆ ಮಳೆಯ ಸಿಂಚನವಾಗಲಿ
ಭೂ ತಾಯಿಯ ಒಡಲ ತಣಿಸಲಿ
ಎಲ್ಲೆಡೆ ಹಸಿರು ಮೈದಳೆಯಲಿ
ಜೀವಿ ಸಂಕುಲಕ್ಕೆ ಆಧಾರವಾಗಲಿ
ಝರಿ ತೊರೆಗಳು ತುಂಬಿ ಹರಿಯಲಿ
ರೈತರ ಮೊಗದಲ್ಲಿ ಮಂದಹಾಸ ಮೂಡಲಿ
ಎಲ್ಲೆಡೆ ಸಮೃದ್ಧಿ ನೆಲೆಸಲಿ
ದೇಶ ಸ್ವಾವಲಂಬನೆಯತ್ತ ಸಾಗಲಿ
ಜನ ನೆಮ್ಮದಿಯ ಜೀವನ ನಡೆಸಲಿ.
–ಡಾ. ಬಸವರಾಜ ಜಿ. ಆರ್.
ಚಿತ್ರದುರ್ಗ ಜಿಲ್ಲೆ