ಆನಂದಡವಿ

ಆನಂದಡವಿ

ರವಿ ಶಶಿ ಭೂಮಿಯ ಕಾಂತದಿಂದ
ಅಗ್ನಿ ವಾಯು ವರುಣನ ಕೃಪೆಯಿಂದ

ಸರ್ವ ಭೂತಗಣ ರೂಪದಿಂದ
ಋತುಚಕ್ರ ಸುಯೋಗ ಮಹಾಯೋಗದಿಂದ

ಫಲಪುಷ್ಪ ವೃಕ್ಷ ಕಾಶಿಯಿಂದ
ವೀರ ಪರಾಕ್ರಮ ಶ್ವೇತಮೌನಗಳಿಂದ

ಖಗ ಮೃಗ ಜೀವಜಂತುಗಳಿಂದ
ಬೀಜ ತತ್ತಿ ದೃಷ್ಠಿ ಕೋನ ವ್ಯಾಸಗಳಿಂದ

ದೈತ್ಯ ಉತ್ತಮ ಕನಿಷ್ಠಗಳಿಂದ
ಝರಿ ತೊರೆ ಮೇಘದಾಕೃತಿಗಳಿಂದ

ಗಿರಿ ಶಿಖರ ಕಣಿವೆಗಳಿಂದ
ಬಹುರೂಪ ವಿವಿಧ ಬಗೆ ವಿನ್ಯಾಸಗಳಿಂದ

ಆನಂದಡವಿಯ ಅನಾವರಣ
ಆನಂದಡವಿಯಲಿ…….!

ಕೃಷ್ಣ ನಾಯಕ್
                ರಾಮನಗರ ಜಿಲ್ಲೆ   


Spread the love
error: Content is protected.