ಚಿಟ್ಟೆ
ಚಿಟ್ಟೆ ..ಚಿಟ್ಟೆ
ಬಣ್ಣದ ಚಿಟ್ಟೆ..
ಬಿಟ್ಟೆ.. ಕೆಟ್ಟೆ..
ಹೂವಿನ ಪಟ್ಟೆ..
ರಂಗು ರಂಗಿನ
ಚಿತ್ತಾರ..
ಮುಂಗಾರಿಗೆ
ನೀ ಹುನ್ನಾರ.
ನಿನ್ನಯ ಬದುಕು
ಅಲ್ಪ ನಿನಾದ..
ನಿನ್ನಯ ನೋಟ
ಇಲ್ಲ ವಿಷಾದ.
ಚಿಟ್ಟೆ.. ಚಿಟ್ಟೆ..
ಏನೀ ಮಾಟ..
ನಲಿವಿನ ಹೊಳೆಯಲಿ
ನಮ್ಮಯ ತೋಟ.
ಹೂವಿನ ತಳಿರಲು
ನಿನ್ನಯ ಆಟ
ಸುಮದ ಸವಿಗೆ
ನಿನ್ನಯ ಓಟ.
ಜನ್ಮದ ಆದಿ
ನಿನ್ನಲಿ ಕೊಟ್ಟೆ
ರಂಗಿನ ಕಾವಿ
ಹುರುಪಲಿ ತೊಟ್ಟೆ.
ಮಕ್ಕಳ ಆಟಕೆ
ನೀ ಬದುಕಾದೆ..
ವಿಧಿಯ ಮೋಡಿಗೂ
ನೀ ಮಸಿಯಾದೆ..
ಕಿಲಕಿಲ ನಗುವಿಗೆ
ನಿನ್ನಯ ಪುಳಕ..
ನಿನ್ನಯ ಹಾದಿಯೇ
ಸುಂದರ ಜಳಕ.
ಸುಮದ ಒಲವಿಗೆ
ಪ್ರೇಮ ಪುರಾಣ..
ನಿನ್ನಯ ಸ್ಪರ್ಶವೇ
ಸುಮದ ತ್ರಾಣ.
ಮಿಂಚಿನ ಬದುಕಲು
ಹುರುಪಿನ ಮೋಡಿ..
ನಿನ್ನಯ ಕಾಣಲು
ತನ್ಮನ ಕೋಡಿ.
ಪತಂಗದೊಲುಮೆ
ಮುಂಗಾರಿನಲ್ಲೇ..
ನವ ಚೈತನ್ಯಕೆ
ನಿನ್ನದೆ ಪ್ರತಿಮೆ.
–
– ನಂದಕುಮಾರ್ ಹೊಳ್ಳ.
ಸಾಸ್ತಾನ ಪಾಂಡೇಶ್ವರ.