ಕಟ್ಟುಹಾವಿನ ಕಡಿತದ ನಂತರ ಬದುಕುಳಿದ ಗ್ಯಾನೇಶ್ವರಿ
ಭಾನುವಾರು 6 ಜುಲೈ 2014ರ ರಾತ್ರಿ ಮೊಬೈಲ್ ಫೊನ್ ರಿಂಗಣಿಸಿ ನನ್ನನ್ನು ಎಬ್ಬಿಸಿತು. ಅತ್ತಕಡೆಯಿಂದ ಡಾ.ಸಿಜ್ಜಿ ಮಾತನಾಡುತ್ತಿದ್ದರು, ಅವರು ಪಿಥೊರ (ಚತ್ತಿಸಗಢ) ವೈದ್ಯರಾಗಿದ್ದು ಸಂತಫ್ರಾನ್ಸಿಸ್ ಸನ್ಯಾಸಿನಿ. ಪಿಥೊರದಲ್ಲಿ ಈ ಮಿಷನರಿಗಳು ಒಂದು ಶಾಲೆ ಹಾಗು ಆಸ್ಪತ್ರೆಯನ್ನು ನಡೆಸುತ್ತಾರೆ. 100 ಕಿಮಿ ದೂರದ ರಾಯಪುರದಲ್ಲಿ ಸರ್ಕಾರಿ ಅಸ್ಪತ್ರೆ ಇದೆ. ಮಿಷನರಿಗಳ ಈ ಆಸ್ಪತ್ರೆಯಲ್ಲಿ ಕೇವಲ ಮೂಲ ಸೌಕರ್ಯವಿದ್ದರೂ ಸುತ್ತ ಇರುವ ಹಳ್ಳಿಗರ ಅವಶ್ಯಕವಾದ ಹಾವು ಕಡಿತದ ಚಿಕಿತ್ಸೆಯಲ್ಲಿ ಎತ್ತಿದ ಕೈ ಎನ್ನಬಹುದು. ಆ ದಿನ ಬೆಳಿಗ್ಗೆ 11.30ರ ಸುಮಾರಿಗೆ ಗ್ಯಾನೇಶ್ವರಿ ಎಂಬ 25 ವರ್ಷದ ಮಹಿಳೆ ಕಟ್ಟುಹಾವಿನ ಕಡಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಳು. 4 ಹಾಗು 2 ವರ್ಷದ ಎರಡು ಮಕ್ಕಳಿದ್ದ ವಿಧವೆ ಅಕೆ. ಮಿಷನರಿ ಆಸ್ಪತ್ರೆಯಿಂದ 12 ಕಿಮಿ ದೂರವಿರುವ ಪಟೆವಾ ಪೊಲೀಸ್ ಠಾಣೆ ವ್ಯಾಪ್ತಿಯ ಝಲಪ್ ಹಳ್ಳಿಯ ನಿವಾಸಿ. ಆಕೆಯ ತಂದೆ ಅವಳನ್ನು ಆಸ್ಪತ್ರೆಗೆ ತಂದು ಸೇರಿಸಿದ್ದ.
ಗ್ಯಾನೇಶ್ವರಿಯ ದೇಹದ ಪ್ರಮುಖ ಲಕ್ಷಣಗಳು (ಉಸಿರಾಟ, ರಕ್ತ ಸಂಚಲನೆ) ವೇಗವಾಗಿ ಕಡಿಮೆಯಾಗುತ್ತಿದ್ದವು. ಹಾವಿನ ವಿಷ ಏರಿಕೆಯ ಎಲ್ಲ ಲಕ್ಷಣಗಳು ಇದ್ದು ಆಕೆಗೆ ಕೃತಕ ಉಸಿರಾಟದ ಅವಶ್ಯಕತೆ ಇತ್ತು. ಮಿಷನರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸಕ ಅಂಬು ಚೀಲ (ಚಿತ್ರನೋಡಿ) ಮಾತ್ರ ಇದ್ದಿತು ಹಾಗು ತುರ್ತು ಸಮಯದಲ್ಲಿ ವೈದ್ಯರು, ವೈದ್ಯ ಸಹಾಯಕರು ಪಕ್ಕದಲ್ಲೇ ಇದ್ದು ಅವಶ್ಯಕತೆ ಇರುವಷ್ಟು ಸಮಯ ಅಂಬೂ ಚೀಲವನ್ನು ಒತ್ತುತ್ತ ಬಿಡುತ್ತ ಕೃತಕವಾಗಿ ಗಾಳಿಯನ್ನು ಎದೆಗೂಡಿಗೆ ತುಂಬಬೇಕಿತ್ತು.
ರೋಗಿಗಾಗಿರುವ ತೊಂದರೆಯನ್ನು ಅರ್ಥಮಾಡಿಕೊಳ್ಳೋಣ: ಕಟ್ಟುಹಾವಿನ ವಿಷ ತುಂಬಾ ಶಕ್ತಿಶಾಲಿ ನ್ಯೂರೊಟಾಕ್ಸಿನ್ ಆಗಿದ್ದು, ದೇಹ ವಿಷದ ಏಟಿಗೆ ತತ್ತರಿಸಿ ಸೆಟೆದುಕೊಳ್ಳುತ್ತದೆ. ತೇಲುಗಣ್ಣು ಹಾಗು ಉಸಿರಾಟದ ವೈಫಲ್ಯ ವಿಷ ಏರುವಿಕೆಯ ಮೊದಲ ಲಕ್ಷಣ.
ಗ್ಯಾನೇಶ್ವರಿ ಈ ಪರಿಸ್ಠಿತಿಯಲ್ಲಿದ್ದರೆ ದಾದಿಯರು ಅಂಬುಚೀಲ ಉಪಯೋಗಿಸಿ ಕೃತಕ ಉಸಿರಾಟ ನೀಡಿ ಆಕೆಯ ಜೀವವನ್ನು ಉಳಿಸಲು ಹೆಣಗುತ್ತಿದ್ದರು. ನಸುಕಾಗುತ್ತಲೇ ಟೀಂ ಇಂಡಿಯನ್ ಸ್ನೇಕ್ಸ್ ನ ನುರಿತ ತಜ್ಞ ಕೇರಳದ ಡಾ.ಪಿಳ್ಳೈ ಅವರನ್ನು ಡಾ.ಸಿಜ್ಜಿ ಸಂಪರ್ಕಿಸಿದಾಗ, ಡಾ.ಪಿಳ್ಳೈ ಅವರು ಮುಕ್ತ ಮನಸ್ಸಿನಿಂದ ಅವರಿಗೆ ಮಾರ್ಗದರ್ಶನ ನೀಡಿದರು.
ದಾದಿಯರು ಮತ್ತೆರಡು ಗಂಟೆ ಕೃತಕ ಉಸಿರಾಟ (ಅಂಬೂ ಚೀಲದ ಬಾಯನ್ನು ರೋಗಿಯ ಬಾಯಿಗೆ ಒತ್ತಿ ಹೀಡಿದು, ಅದಕ್ಕಿರುವ ರಬ್ಬರ್ ಚೀಲವನ್ನು ನಿಮಿಷಕ್ಕೆ ಸರಾಸರಿ 16 ರಿಂದ 20 ಬಾರಿ ಒತ್ತುವುದು) ಹಾಗೂ ಹಾವಿನ ವಿಷದ ಪ್ತ್ರತ್ಯೌಷಧ ನೀಡಿದರು (Anti Snake Venom) ಆಕೆಯ ಸ್ಥಿತಿ ಸ್ತಬ್ಧವಾಯಿತು (ಅಂದರೆ ಏನೂ ಪೂರಕ ಯಾ ಮಾರಕ ಬೆಳವಣಿಗೆಗಳಿಲ್ಲದ ಸ್ಥಿತಿ). ಡಾ.ಪಿಳ್ಳೈ ಅವರು ಮಹಾರಾಷ್ಟ್ರದ ಹಳ್ಳಿಗಳಲ್ಲಿ ಹಾವಿನ ಕಡಿತದ ರೋಗಿಗಳಿಗೆ ಚಿಕಿತ್ಸೆನೀಡುತ್ತಿದ್ದ ಮತ್ತೊಬ್ಬ ತಜ್ಞ ಡಾ.ಹಿಮ್ಮತ್ ಬಾವಸ್ಕರ್ ರನ್ನು ಸಂಪರ್ಕಿಸಿ ಡಾ.ಸಿಜ್ಜಿಯವರಿಗೆ ಮುಂದಿನ ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ಕೊಡಿಸಿದರು. ಡಾ.ಹಿಮ್ಮತ್ ಬಾವಸ್ಕರ್ ಅವರು ವಿಷದಿಂದ ಸೆಟೆದ ದೇಹ ಮತ್ತೆ ಸಹಜಸ್ಥಿತಿಗೆ ಮರಳಲು ಪೂರಕವಾದ ಔಷಧಗಳನ್ನು ತಿಳಿಸಿದರು. ಎಲ್ಲರ ಪ್ರಯತ್ನದಿಂದ ಗ್ಯಾನೇಶ್ವರಿ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳಲಾರಂಭಿಸಿದಳು ಹಾಗೂ ಮುಂದಿನ 24 ಗಂಟೆಯಲ್ಲಿ ಸ್ಥಿರವಾದಳು.
ಅಕೆಯ ಆರೋಗ್ಯ ಸ್ಥಿತಿ ಕೈಜಾರಿ ಹೋಗಬಾರದೆಂದು ತೀವ್ರನಿಗಾವಹಿಸಿ ನೋಡಿಕೊಂಡೆವು. 15cc ಹಾವಿನ ವಿಷದ ಪ್ರತ್ಯೌಷಧ ಹಾಗು ಇತರೆ ಪೂರಕ ಔಷಧಿಗಳನ್ನು ನೀಡಿದೆವು. ಇದಿಷ್ಟು ಕತೆಯ ಅರ್ಧಭಾಗ, ಕತೆಯ ಇನ್ನರ್ಧ ಭಾಗಹಾವಿನದ್ಡೆ. ಗ್ಯಾನೇಶ್ವರಿಯ ಕುಟುಂಬ ವರ್ಗದವರು ಹಾವನ್ನು ಹಿಡಿದು ತಂದಿದ್ದರು. ಟೀಂ ಇಂಡಿಯನ್ ಸ್ನೇಕ್ಸ್ ಅದನ್ನು ಸಾಧಾರಣ ಕ ಟ್ಟು ಹಾವೆಂದು ಗುರುತಿಸಿದರು. ಹಾವನ್ನು ತೂತುಗಳಿರುವ ಪ್ಲಾಸ್ಟಿಕ್ ಜಾಡಿಯಲ್ಲಿಟ್ಟಿದ್ದರು. ಹಾವನ್ನೇನು ಮಾಡುವಿರೆಂದು ಕೇಳಿದಾಗ ಡಾ.ಸಿಜ್ಜಿಯವರು ಗ್ಯಾನೇಶ್ವರಿ ಆರೋಗ್ಯವಂತಳಾದೊಡನೆ ಅದನ್ನು ಕಾಡಿಗೆ ಬಿಡುವರು ಎಂದು ತಿಳಿಸಿದರು. ಟೀಂ ಇಂಡಿಯನ್ ಸ್ನೇಕ್ಸ್ ರವರು ಹಾವಿಗಾಗಬಹುದಾದ ಒತ್ತಡ ನಿವಾರಿಸಲು ಜಾಡಿಗೆ ಸ್ವಲ್ಪ ನೀರನ್ನು ಹಾಕಲು ಹೇಳಿದರು. ಮಾರನೆ ದಿನ ಅಂದರೆ ಜುಲೈ 8, 2014ರಂದು ಹಾವು ಹಾಗು ಗ್ಯಾನೇಶ್ವರಿ ಇಬ್ಬರೂ ಬಿಡುಗಡೆಯಾದರು.
ಮೂಲ ಲೇಖನ: ಪ್ರಿಯಾಂಕಾ ಕದಮ್
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ