ಮಾಸ ವಿಶೇಷ – ಬಾಡುಬಕ್ಕ
© ಡಬ್ಲ್ಯೂ ಸಿ ಜಿ, ಬಾಡುಬಕ್ಕ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Indian Redwing
ವೈಜ್ಞಾನಿಕ ಹೆಸರು : Pterolobium hexapetalum
“ಬಾಡುಬಕ್ಕ” (ಇಂಡಿಯನ್ ರೆಡ್ವಿಂಗ್) ಎಂಬ ಪೊದೆಯನ್ನು ನೀವೂ ಹಳ್ಳಿಗಳಕಡೆ ನೋಡಿರಬಹುದು. “ಬಾಡು” ಎಂದರೆ ಮಾಂಸ “ಬಕ್ಕ” ಎಂದರೆ ಬಕ್ಷಿಸು ಎಂದು. ಈ ಪೊದೆಯಲ್ಲಿನ ಮುಳ್ಳುಗಳು ಮೀನಿನ ಗಾಳದಂತೆ ಕೊಕ್ಕೆಯಾಗಿದ್ದು, ನಮ್ಮ ಚರ್ಮಕ್ಕೆ ಚುಚ್ಚಿದರೆ ಮಾಂಸ ಕಿತ್ತುಬರುತ್ತದೆ. ಮುಳ್ಳು ಹೇಗೆ ಚುಚ್ಚುತ್ತದೋ ಹಾಗೆಯೇ ನಿಧಾನವಾಗಿ ಹಿಂದಕ್ಕೆ ತೆಗೆದುಕೊಂಡರೆ ಮಾತ್ರ ಬಿಡಿಸಿಕೊಳ್ಳಲೂ ಸಾಧ್ಯ, ಇಲ್ಲವಾದರೆ ಅದರಿಂದ ಬಿಡಿಸಿಕೊಳ್ಳಲು ಕಷ್ಟವಾಗುತ್ತದೆ. ಇದೊಂದು ಎಲೆ ಉದುರುವ ಕುರುಚಲು ಪ್ರದೇಶದಲ್ಲಿ ಪ್ರಧಾನವಾಗಿ ಬೆಳೆಯುವಂತಹ ದೊಡ್ಡದಾದ ಕವಲೊಡೆಯುವ ಪೊದೆ. ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಹಳದಿ ಬಿಳಿಯ ಗೊಂಚಲು ಗೊಂಚಲು ಹೂ ಬಿಡುವ ಸಸ್ಯ. ಇದು ದಕ್ಷಿಣ ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಪ್ರಮುಖವಾಗಿ ಜೇನ್ನೊಣಗಳಿಗೆ ಮಕರಂದ ನೀಡುವ ಸಸ್ಯ.