ಭೂ(ಮಾತೆ)
ಎನಿತು ದಯವೋ
ತಾಯೇ ನಿಂದು
ನುತಿಸಲಾಗದು
ನಿನ್ನ ರಶ್ಮಿಯಿರಲು
ಇಲ್ಲಿ ಎಲ್ಲ
ಹೊಳೆವವು..
ಪಂಚ ರತ್ನ
ಸಲಹೋ ಯತ್ನ
ಸದಾ ವಿಸ್ಮಯ.!
ನಿನ್ನ ಕರುಣೆ
ಹಾದಿಯಲ್ಲೇ
ಜೀವ ತಾಣವು..
ನಿನ್ನ ಒಲುಮೆಯಿರಲು
ತಾಯೇ..
ಬಾಳು ಪಾವನ.
ಲಕ್ಷ ನೀನೆ..
ಕೋಟಿ ನೀನೆ..
ಅನರ್ಘ್ಯ ರತ್ನವು..
ನಿನ್ನ ಒಡಲ
ಸೇರಲೆಂತು..
ನಾ ಚಿಕ್ಕ ಬಿಂದವು.
ಮಮತೆಯಿರುವ
ಪ್ರೀತಿಯಿರುವ
ಸದಾಚಾರಿಣಿ..
ಕೋಪ-ತಾಪ ಎಲ್ಲ ನುಂಗಿ
ಪ್ರೇಮಧಾರೆ ಸೂಸುವಂತ
ಅಮೃತವರ್ಷಿಣಿ..
ಅಣು-ಅಣುವಲ್ಲಿ ವಿರಾಜವಂತೆ..
ಜಗದ ಒಡತಿ ನೀನೆಯಂತೆ..
ಸಲಹು ಮಾತೆಯೇ..
ದಾಹ ದಾಸ್ಯದಲ್ಲಿ ಬಿದ್ದು
ದೇಹ ತ್ಯಜಿಸುವ ಘಳಿಗೆ
ಮತ್ತೆ ಸೇರುವೆ…
ನಿನ್ನ ಪಡೆಯುವೆ.
–ನಂದಕುಮಾರ್ ಹೊಳ್ಳ .ಎಸ್
ಪಾಂಡೇಶ್ವರ, ಸಾಸ್ತಾನ.