ಅಡವಿಯಲ್ಲಿ ವಿಶ್ವ ವನ್ಯಜೀವಿ ದಿನಾಚರಣೆ

ಅಡವಿಯಲ್ಲಿ ವಿಶ್ವ ವನ್ಯಜೀವಿ ದಿನಾಚರಣೆ

 ಪ್ರತಿ ವರ್ಷದ ಮಾರ್ಚ್ 3 ನೇ ದಿನಾಂಕವನ್ನು ಅಂತರರಾಷ್ಟ್ರೀಯ ವನ್ಯಜೀವಿಗಳ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

UNGA ಅಂತರಾಷ್ಟ್ರೀಯ ಒಕ್ಕೂಟ. ಇದು ಅವನತಿಯ ಅಂಚಿನಲ್ಲಿ ಇರುವ ವನ್ಯಜೀವಿಗಳ ಪೂರ್ಣ ನಿರ್ಣಾಮವನ್ನು ತಪ್ಪಿಸಲು ಮತ್ತು ಅವನತಿಯ ಜಾಡು ಹಿಡಿದಿರುವ ಜೀವಜಂತುಗಳ  ಬಗ್ಗೆ ವಿಶ್ವದ ಜನರ ಗಮನಕ್ಕೆತಂದು, ಅರಿವು ಮೂಡಿಸಲು ಕಾರ್ಯೋನ್ಮುಕವಾಗಿರುವ ಒಂದು ಸಂಘಟನೆ. ಅದರಂತೆ ಈ ವರ್ಷವೂ ಅಳಿವಿನಂಚಿನಲ್ಲಿರುವ ದೊಡ್ಡ ಬೆಕ್ಕುಗಳು ಎಂಬ ಅಣೆಪಟ್ಟಿಯೊಂದಿಗೆ ಆಚರಿಸಲಾಗುತ್ತಿದೆ.

ಈ ಬಾರಿ 3/3/2018 ರಂದು ಅಂತರರಾಷ್ಟ್ರೀಯ ವನ್ಯಜೀವಿ ದಿನವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕರ್ನಾಟಕ ಸರ್ಕಾರ ಇವರು WILDLIFE CONSERVATION GROUP ರವರ ಸಹಯೋಗದೊಂದಿಗೆ  ಆಚರಿಸಲಾಯಿತು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪಕ್ಕದಲ್ಲೇ ಬರುವ  ತಟ್ಟೆಕೆರೆ ಮತ್ತು ಅರೆಕಡಕಲು ಸರ್ಕಾರಿ ಹಿರಿಯ ಪ್ರಾಥಮಿಕ ಮಕ್ಕಳು ಭಾಗವಹಿಸಿದ್ದರು. ಈ ಎರಡೂ ಶಾಲೆಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲೇ ಇರುವುದರಿಂದ, ಇಲ್ಲಿನ ಮಕ್ಕಳಿಗೆ ಕಾಡಿನ ಆಗು-ಹೋಗುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ದಿಂದ ಅವರನ್ನೇ ಆಯ್ಕೆ ಮಾಡಲಾಯಿತು. ಮಕ್ಕಳಿಗೆ ಮುಂಜಾನೆಯ ಉಪಹಾರ ಕೊಟ್ಟ ನಂತರ ಅಡವಿ ಫೀಲ್ಡ್ ಸ್ಟೇಷನ್, ರಾಗಿಹಳ್ಳಿ ಯಲ್ಲಿ ಕಾರ್ಯಕ್ರಮವನ್ನು  ಚಾಲನೆಗೊಳಿಸಲಾಯಿತು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಗ್ಗೆ ಫ಼ರೆಸ್ಟರ್ ಮಹೇಶ್ ರವರು ಮಕ್ಕಳಿಗೆ ವಿವರಿಸಿದರು. ಮಕ್ಕಳಿಗೆ ಹುಲಿ ಚಿರತೆ ಸಿಂಹಗಳ ಜೀವನ ಮತ್ತು ಭಾರತದಲ್ಲಿ ಅವುಗಳ ಸ್ಥಿತಿಯ ಬಗ್ಗೆ  ವೀಡಿಯೋ ತೋರಿಸಲಾಯಿತು.ಮಕ್ಕಳಿಗೆ ಪರಿಸರ ಚಟುವಟಿಕೆಗಳನ್ನು ಮಾಡಲಾಯಿತು.

RFO ಗಣೇಶ್ ರವರು ಮಕ್ಕಳೊಂದಿಗೆ ಬೆರೆತು ಸಂವಾದಿಸಿ ಪರಿಸರ ಕಾಡಿನ ರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟರು. ಭಾರತದ ದೊಡ್ಡ ಬೆಕ್ಕುಗಳ ಬಗ್ಗೆ ತಿಳಿಸಿಕೊಟ್ಟರು.

WILDLIFE CONSERVATION GROUP ಯ ಸದಸ್ಯರಾದ ಅಶ್ವಥ್ ಕೆ ಎನ್ ಮತ್ತು ಜೈಕುಮಾರ್ ರವರು ದೃಶ್ಯ ಮಾದ್ಯಮದ ಮೂಲಕ ಮಕ್ಕಳಿಗೆ ದೊಡ್ಡಬೆಕ್ಕುಗಳಾದ ಹುಲಿ,ಸಿಂಹ,ಹಿಮಚಿರತೆ,ಕಪ್ಪುಚಿರತೆ, ಚೀತಾಗಳ ಬಗ್ಗೆ ಮಾಹಿತಿ ನೀಡಿದರು. ಚೀತಾ ಏಕೆ ಭಾರತದಿಂದ ಅವನತಿ ಹೊಂದಿತು ಹುಲಿ ಚಿರತೆ ಸಿಂಹ ಕಪ್ಪುಚಿರತೆ ಪೂಮಾ ಹಿಮಚಿರತೆ ಈ ದೊಡ್ಡ ಬೆಕ್ಕುಗಳ ಸಂಖ್ಯೆ ದಿನೆ ದಿನೆ ಕಡಿಮೆಯಾಗುತ್ತಿದೆ. ಇವುಗಳು ಕಡಿಮೆಯಾಗುತ್ತಿರುವುದಕ್ಕೆ ಮೂಲ ಕಾರಣ.

• ತಮ್ಮ ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತವೆ ಎಂದು ದೊಡ್ಡಬೆಕ್ಕುಗಳನ್ನು ಕೊಲ್ಲುತ್ತರೆ.
• ಮಾನವರು ನಡೆಸುತ್ತಿರುವ ಕಳ್ಳಬೇಟೆಯಿಂದ ದೊಡ್ಡ ಬೆಕ್ಕುಗಳಿಗೆ ಜಿಂಕೆಯಂತಹ ಬಲಿಪ್ರಾಣಿ ಸಿಗದೆ ಆಡು ಕುರಿ ತಿನ್ನಲು ಊರಿಗೆ ಬರುತ್ತದೆ.
• ಕೃಷಿಗಾಗಿ,ಅಭಿವೃದ್ಧಿಗಾಗಿ ನೆಲದ ಮೂಲ ಸ್ವರೂಪವನ್ನೇ ಬದಲಿಸಿ ಬಿಟ್ಟಿದ್ದರಿಂದ ಬಲಿಪ್ರಾಣಿಗಳ ಸಂಖ್ಯೆ ಕುಗ್ಗಿದೆ.ನಾಡಿನಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಿದೆ.
• ಈ ದೊಡ್ಡಬೆಕ್ಕುಗಳ ಚರ್ಮಕ್ಕೆ, ದೇಹದ ಇತರ ಭಾಗಗಳಿಗೆ ಚೀನಾ ಇತರೆ ದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಇದಕ್ಕಾಗಿ ನಡೆಯುತ್ತಿರುವ ಕಳ್ಳಬೇಟೆ ದೊಡ್ಡಬೆಕ್ಕುಗಳ ಅವನತಿಗೆ ಮೂಲ ಎನ್ನಬಹುದು.
• ಕಾಳಿಚ್ಚು,ಬದಲಾಗುತ್ತಿರುವ ಜಾಗತಿಕ ತಾಪಮಾನ ಎಲ್ಲವೂ ಸೇರಿ ದೊಡ್ಡಬೆಕ್ಕುಗಳು ಬದುಕಲು ಆವಾಸವೇ ಇಲ್ಲದಾಗುತ್ತಿವೆ. ?
ಎಂದು ವಿವರಿಸಿದರು..

ಮಕ್ಕಳಿಗೆ ಜೀವಜಾಲದ ಬಗ್ಗೆ ಹಾಗು ಪರಿಸರದಲ್ಲಿ ಪ್ರಾಣಿಗಳ ನಡುವಿನ ಪರಸ್ಪರ ಅವಲಂಬನೆ ಬಗ್ಗೆ ಚಟುವಟಿಕೆ ಮೂಲಕ ತಿಳಿಸಿಕೊಡಲಾಯಿತು ಎಲ್ಲಾ ಮಕ್ಕಳಿಗೆ ವಿಶ್ವವನ್ಯಜೀವಿ ದಿನದಲ್ಲಿ ಭಾಗವಹಿಸಿದಕ್ಕೆ ಪ್ರಮಾಣಪತ್ರವನ್ನು ನೀಡಲಾಯಿತು.  ದೊಡ್ಡಬೆಕ್ಕುಗಳಂತಹ ಮಾಂಸಹಾರಿ ಪ್ರಾಣಿಗಳು ಬದುಕ ಬೇಕಾದರೆ ಸಸ್ಯಹಾರಿ ಪ್ರಾಣಿಗಳ ಉಳಿವು ಅಗತ್ಯ. ಪ್ರಾಣಿಗಳ ಉಳಿವಿಗೆ ಕಾಡಿನ ಉಳಿವು ಅಗತ್ಯ ಎಂದು ಮನವರಿಕೆ ಮಾಡಿಸಿ ತಮ್ಮ ಸುತ್ತಮುತ್ತಲಿನ ಕಾಡು ಮತ್ತು ನೀರಿನ ಮೂಲಗಳನ್ನು ಉಳಿಸಿಕೊಳ್ಳುವುದರ ಮಹತ್ವವನ್ನು ತಿಳಿಸಲಾಯಿತು.

ಪ್ರತಿ ದಿನ ವನ್ಯಜೀವಿ ದಿನ

ವನ್ಯಜೀವಿಗಳಿಗೆ ತೊಂದರೆ ಕೊಡುತ್ತಿರುವವರು ನಾವೇ.ಅದನ್ನು ಕಡಿಮೆ ಮಾಡಬೇಕಾದವರೂ ನಾವೇ. ಆದರೆ ಪ್ರಾರಂಬಿಸುವುದು ಎಲ್ಲಿಂದ? ನಾನು ಒಬ್ಬ ಮಾಡಿದರೆ ಅದರ ಪರಿಣಾಮ ಏನು? ಎಂಬ ಪ್ರಶ್ನೆ ಸಹಜ.  ಹನಿ ಹನಿ ಕೂಡಿದರೆ ಹಳ್ಳ. ತೆನೆ ತೆನೆ ಕೂಡಿದರೆ ಬಳ್ಳ!.ಯಾರಿಗೆ ಗೊತ್ತು. ನಾವು ಒಬ್ಬಬ್ಬರೂ ಪ್ರಜ್ಞಾಪೂರ್ವಕವಾಗಿ ತೆಗೆದು ಕೊಂಡ ಪುಟ್ಟ ಪುಟ್ಟ ನಿರ್ಧಾರಗಳು ಸಾಸಿರವಾಗಿ ಅಳಿವಿನಂಚಿನಲ್ಲಿ ಇರುವ ಜೀವಿಗಳಿಗೆ ವರವಾಗಬಹುದು.

ವಿಶ್ವ ವನ್ಯಜೀವಿ ದಿನಾಚರಣೆಗೆ ನೀವೇನು ಮಾಡಬಹುದು.
ಪ್ರತಿದಿನ ಹೀಗೆ ಮಾಡಿ . ಇಂದೇ ಪ್ರಾರಂಭಿಸಿ
• ನಿರ್ಧರಿಸಿ: ಪರಿಸರಕ್ಕೆ ವನ್ಯಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಪರಿಸರಸ್ನೇಹಿಯಾಗಿ ಬದುಕಲು ಪ್ರಾರಂಭಿಸಿ.
• ಬೇಟಿಕೊಡಿ:ಉದ್ಯಾನವನ, ಮೃಗಾಲಯ, ಸಸ್ಯತೋಟ,ಮತ್ಸಾಲಯ, ಪಕ್ಷಿಧಾಮಗಳಿಗೆ ಭೇಟಿಕೊಡಿ.
• ಬಳಸಬೇಡಿ :ಪ್ರಾಣಿ ಪಕ್ಷಿಗಳ ಚರ್ಮ,ಪುಕ್ಕ ಇತರೆ ಭಾಗಗಳಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ಬಳಸಬೇಡಿ.
• ಸ್ವಯಂಸೇವಕರಾಗಿ: ಎಷ್ಟೋ ಬಾರಿ ನೀವು ಧನಸಹಾಯವನ್ನೇ ಮಾಡಬೇಕು ಎಂದೇನು ಇಲ್ಲ. ನಿಮ್ಮ ಬಿಡುವಿನ ವೇಳೆಯಲ್ಲಿ ವನ್ಯಜೀವಿಗಳ ಬಗ್ಗೆ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆ ಅಥವ ಝೂ ಗಳಲ್ಲಿ ಸ್ವಯಂಸೇವಕರಾಗಿ ನಿಮ್ಮ ಕಾಲವನ್ನು ಕೊಡಿ.
• ಜಾಗತಿಕವಾಗಿ ಯೋಚಿಸಿ ಸ್ಥಳಿಯವಾಗಿ ಕಾರ್ಯೋನ್ಮುಕರಾಗಿ. ನಿಮ್ಮ ಸುತ್ತ ಮುತ್ತಲಿನ ಕಾಡು, ಗಿಡ ಮರ ಹಳ್ಳ ಕೆರೆ,ಪ್ರಾಣಿ ಪಕ್ಷಿಗಳಿಗೆ ಉಂಟಾಗುತ್ತಿರುವ ತೊಂದರೆಯ ಬಗ್ಗೆ ತಿಳಿದುಕೊಳ್ಳಿ.
• ಧೈರ್ಯವಾಗಿ ಮಾತಾಡಿ: ನಿಮಗೆ ತಿಳಿದಿರುವ ಪರಿಸರ ಜ್ಞಾನವನ್ನು ನಿಮ್ಮ ಸ್ನೇಹಿತರೊಂದಿಗೆ ಕುಟುಂಬದೊಂದಿಗೆ ಮಾತಾಡಿ. ನಿಮಗೆ ತಿಳಿಯದ ವಿಷಯವನ್ನು ಪ್ರಶ್ನೆ ಮಾಡಿ ತಿಳಿದುಕೊಳ್ಳಿ.
• ಅಧಿಕಾರಿಗಳಿಗೆ ತಿಳಿಸಿ:ಕಳ್ಳಬೇಟೆ,ಮೀನುಶಿಕಾರಿ,ಮರಗಳ್ಳತನ ಇತರೆ ಪರಿಸರಕ್ಕೆ ಸಂಭಂದಿಸಿದಂತಹ ಅಕ್ರಮಗಳನ್ನು ಅಧಿಕಾರಿಗಳ ಗಮನಕ್ಕೆ ತನ್ನಿ. ಶಿಳ್ಳೆಕಾರರು ಕೊಟ್ಟ ಮಾಹಿತಿ ಹಲವು ಬಾರಿ ನಶಿಸುತ್ತಿರುವ ಪ್ರಾಣಿಗಳ ರಕ್ಷಣೆಗೆ ವರದಾನವಾಗಬಲ್ಲವು.

ಲೇಖನ: ಶಂಕರಪ್ಪ.ಕೆ.ಪಿ
ಬೆಂಗಳೂರು ಜಿಲ್ಲೆ

Spread the love
error: Content is protected.