ಮಾಸ ವಿಶೇಷ – ಚನ್ನಂಗಿ ಮರ

ಮಾಸ ವಿಶೇಷ – ಚನ್ನಂಗಿ ಮರ

©ಡಬ್ಲ್ಯೂ ಸಿ ಜಿ, ಚನ್ನಂಗಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Small Flowered Crape Myrtle
ವೈಜ್ಞಾನಿಕ ಹೆಸರು : Lagerstroemia parviflora

ಈ ಮರವನ್ನು ಕನ್ನಡದಲ್ಲಿ ಚನ್ನಂಗಿ ಮರ ಎಂದು ಕರೆಯುವರು. ವೈಜ್ಞಾನಿಕವಾಗಿ “ಲಾಜರ್ಸ್ಟ್ರೋಮಿಯಾ ಪಾರ್ವಿಫ್ಲೋರಾ” ಎಂದು ಕರೆಯುವರು. ಎಲೆ ಉದುರುವ ಕುರುಚಲು ಕಾಡು ಪ್ರದೇಶದಲ್ಲಿ ಬೆಳೆಯುವ ಈ ಮರ, ಸುಮಾರು 30 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದು ಏಪ್ರಿಲ್ ನಿಂದ ಜೂನ್ ನಲ್ಲಿ ಸಣ್ಣ ಬಿಳಿಯ ಹೂಗಳೊಂದಿಗೆ ತಿಳಿ ಹಸುರಿನ ಚಿಗುರೆಲೆಗಳು ಮರಪೂರ್ತಿ ಮೂಡುತ್ತವೆ, ಹೆಸರಿಗೆ ತಕ್ಕಂತೆ ಸುಂದರವಾಗಿ ಕಾಣುತ್ತದೆ. ಇದರ ಹಂಚಿಕೆ ಭಾರತ, ಭೂತನ್, ನೇಪಾಳ, ಮೈಯನ್ಮರ್ ದೇಶಗಳಲ್ಲಿ ಕಂಡುಬರುತ್ತವೆ. ಚರ್ಮದ ಉತ್ಪಾದನಾ ಕೈಗಾರಿಕೆ, ಶಾಯಿ ತಾಯಾರಿಕೆ ಮತ್ತು ಕಪ್ಪು ಬಣ್ಣದ ತಾಯಾರಿಕೆಯಲ್ಲಿ ಇದರ ಗಮ್ ಬಳಸಲಾಗುವುದು.

Spread the love
error: Content is protected.