ಮಾಸ ವಿಶೇಷ – ಬೆಲ್ ಮಿಮೋಸ
© ಡಬ್ಲ್ಯೂ ಸಿ ಜಿ, ಬೆಲ್ ಮಿಮೋಸ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು : Sicklebush
ವೈಜ್ಞಾನಿಕ ಹೆಸರು : Dichrostachys cinerea
ಇದರ ಮೂಲ ಆಫ್ರಿಕಾದ್ದು, ಭಾರತದ ಉಪಖಂಡ, ಉತ್ತರ ಆಸ್ಟ್ರೇಲಿಯಗಳಲ್ಲಿ ಕಂಡು ಬರುತ್ತದೆ. ಕೆರಿಬಿಯನ್ ಮತ್ತು ಆಗ್ನೇಯ ಏಷ್ಯಾದ ಭಾಗಗಳಿಗೆ ಪರಿಚಯಿಸಲ್ಪಟ್ಟಿದೆ. ಬಳ್ಳಾರಿ, ತುಮಕೂರು, ಹಾಸನ, ಮೈಸೂರುಗಳಂತಹ ಶುಷ್ಕ ಮತ್ತು ಅರೆ ಶುಷ್ಕ ಎಲೆ ಉದುರುವ ಪ್ರದೇಶಗಳಲ್ಲಿ ಇವು ಬೆಳೆಯುತ್ತವೆ. ಬೆಲ್ ಮಿಮೋಸ ಮುಳ್ಳಿನ ಪೊದೆಯಂತೆ ಸುಮಾರು ಏಳು ಮೀಟರ್ ಎತ್ತರದವರಿಗೆ ಬೆಳೆಯುತ್ತದೆ. ಇದರ ತೊಗಟೆ ಹಸಿರು ಮಿಶ್ರಿತ ಬೂದು ಬಣ್ಣದ್ದು, ಸಿಲಿಂಡರಾಕಾರದ ಹೂವಿನ ಮೇಲ್ಭಾಗ ಕೆಂಪು ಮತ್ತು ತುದಿ ಭಾಗದಲ್ಲಿ ಹಳದಿ ಇದ್ದು ಆರರಿಂದ ಎಂಟು ಸೆಂಟಿಮೀಟರ್ ಉದ್ದದ ಪರಿಮಳಯುಕ್ತ ಹೂಗಳು ಬಿಡುತ್ತವೆ. ಇವು ಮೇ-ಸೆಪ್ಟೆಂಬರ್ ತಿಂಗಳುಗಳಲ್ಲಿ ಹೂವು ಮತ್ತು ಹಣ್ಣುಗಳನ್ನು ಬಿಡುತ್ತವೆ. ಈ ಸಸ್ಯದ ಎಲೆ, ಚಿಗುರು, ಹೂವು, ಹಣ್ಣು ಮತ್ತು ಬೀಜಗಳನ್ನು ಜಾನುವಾರುಗಳು, ಕಾಡುಎಮ್ಮೆ, ಜಿರಾಫೆ, ಜಿಂಕೆ ಹೀಗೆ ಹಲವಾರು ಪ್ರಾಣಿಗಳಿಗೆ ಆಹಾರವಾಗಿದೆ. ಇದೊಂದು ಸಾಂಪ್ರದಾಯಿಕ ಔಷಧಿಯ ಸಸ್ಯ ಇದರ ತೊಗಟೆ, ಬೇರು ಮತ್ತು ಎಲೆಗಳಿಂದ ತಲೆನೋವು, ಹಲ್ಲುನೋವು, ಭೇದಿ, ಕುಷ್ಠರೋಗ, ಕೆಮ್ಮು, ಮೂಳೆಯ ಮುರಿತ ಮತ್ತು ಮೂತ್ರವರ್ಧಕಗಳಾಗಿ ಬಳಸಲಾಗುತ್ತದೆ.