ಸುಡುತಿದೆ ಅವನಿ…
ಸುಡುತಿದೆ ಸುಡುತಿದೆ
ನೆಲ ಜಲ ಅನಿಲ.
ತಾಪದಲ್ಲಿ ಕವಿದಿದೆ
ತಾರೆ ರೂಪ ಕದಡಿದೆ.
ಮಂದಾರ ಕುಸುಮಗಳು
ಪಾರಿಜಾತ ವೃಕ್ಷಗಳು
ಮಾಮರದ ಕೋಕಿಲದ
ಮುಂಗಾರ ನೆನಪುಗಳು.
ನೀರಿಗಾಗಿ ಹಾಹಾಕಾರ
ನೀರೆಗಾಗಿ ಹುನ್ನಾರ
ನೀನಿರುವ ಬಗೆಯದುವೆ
ನೀಲಾವೃತ ಚಂದಿರ.
ಮರವೆಲ್ಲವ ಕಡಿದೆಬ್ಬಿಸಿ
ಮಲೆತೆವರು ನಾವು
ಮರಣವಂತು ಸಂದಿದೆ
ಮರುಗಲಿಲ್ಲ ನೀವು.
ಸಸ್ಯರಾಶಿ ಕರಗಿದೆ
ಸಂತಾಪ ತಳೆದಿದೆ
ಸುವಿಚಾರ ಕಳಚುತಲಿ
ಪ್ರಾಣಿಭೇದ ನಶಿಸಿದೆ.
ಹಸಿರಿನಲ್ಲಿ ಕಾಂತಿಯಿಲ್ಲ
ಹಸಿವೆಯನ್ನು ನೀಗಿಲ್ಲ
ಹರಿದಾದ ಬದುಕಲ್ಲಿ
ಹಂತಕರು ನಾವಿಲ್ಲಿ
ಇಳೆಯ ನೂರ್ಕಾಲ ಕಾವುದು.
ಪರಮಪೂಜಿತವಿದುವೆ
ನಮ್ಮೆಲ್ಲರ ನಾಡು
ನಾಡ ಭಾಷೆ ರಸ ಗಂಧಕ್ಕೆ
ನಡೆಸುವವರು ಯಾರು?
ನದಿ ನದಗಳ ಉಳಿಕೆಯಲ್ಲಿ
ನಭವೇರಿದ ಕಾಡಿನಲ್ಲಿ
ನಶೆಯೇರಿದ ಮನುಜರೇ
ನಮ್ಮದೆಂದು ಸಾರಿ
ಸುಂದರವು ಈ ಅವನಿ
ಸತ್ಯ ತಿಳಿಯುವಲ್ಲಿ
ಸುಭಾಷಿತದ ಸಾರವಿದೆ
ಸುಮಧುರ ಕೇಳಿಲ್ಲಿ.
ಇನ್ನಾದರೂ ಒಂದಾಗಿ
ಇರುವಿಕೆಯ ಉಳಿಸಿ
ಇಂದು ನಿಮ್ಮ ಕೊಡುಗೆಯೇ
ಇಳೆಯ ನೂರ್ಕಾಲ ಕಾವುದು.
– ನಂದಕುಮಾರ್ ಹೊಳ್ಳ., ಸಾಸ್ತಾನ, ಉಡುಪಿ ಜಿಲ್ಲೆ