ಭೂರಮೆಯ ಸೊಬಗು

ಭೂರಮೆಯ ಸೊಬಗು

ಭೂರಮೆಯ ಸೊಬಗು ನೋಡಲು
ಕಣ್ಣುಗಳು ಸಾಲವುದಿಲ್ಲ
ಪ್ರಕೃತಿ ಸಿರಿಯ ಬಣ್ಣಿಸಲು
ಪದಗಳು ಸಾಲುವುದಿಲ್ಲ.

ಪರಿಸರದಲ್ಲಿದೆ ಸಂಗೀತ ಹಕ್ಕಿಗಳ ಕಲರವ
ದುಂಬಿಗಳ ಝೇಂಕಾರ.
ಮಳೆ ಗುಡುಗಿನಲೂ ಸಾಮಗಾನ
ಕೇಳಲು ಕಿವಿಗಳು ಸಾಲುವುದಿಲ್ಲ.

ತರುಲತೆಗಳು ಖಗಮೃಗಗಳು
ಕಾನನದ ಸೊಬಗಿನ ಮೂಲ
ನದನದಿ ಝರಿ ತೊರೆಗಳ
ಅಂದ ಹೊಗಳಲು ರೂಪಕಗಳು ಸಾಲುವುದಿಲ್ಲ.

ಮಲ್ಲೆ ಮಲ್ಲಿಗೆ ಜಾಜಿ ಕೇದಗೆ ಸಂಪಿಗೆಯ
ಸುವಾಸನೆ ಬಲು ಚೆಂದ
ವರ್ಷಕಾಲದ ಮಣ್ಣವಾಸನೆಯ
ಕಂಪು ಹೊಗಳಲು ಕವನಗಳು ಸಾಲುವುದಿಲ್ಲ.

ಈ ಜಗವು ಆನಂದಮಯವಾಗಲು
ಸಿಹಿಜೀವಿಗಳ ಕೊಡುಗೆ ಅಪಾರ
ಪರಿಸರವ ಉಳಿಸಿ ಬೆಳೆಸಲು
ಸಣ್ಣ ಪ್ರಯತ್ನಗಳು ಸಾಲುವುದಿಲ್ಲ.

       – ಸಿ. ಜಿ. ವೆಂಕಟೇಶ್ವರ
                             ತುಮಕೂರು ಜಿಲ್ಲೆ


Spread the love
error: Content is protected.