ಅರಣ್ಯ ರಕ್ಷಕ

ನೀನೊಬ್ಬ ಅರಣ್ಯ ರಕ್ಷಕ
ಪರಿಸರದ ಪರಿಚಾರಕ
ಶಿಸ್ತು – ಸಂಯಮವೇ ನಿನಗಾಧರ
ನಿಸ್ವಾರ್ಥ ಸೇವೆಗೆ ನಿನಗೆ ಸಾಟಿಯಾರ
ಹಗಲು-ರಾತ್ರಿಗಳ ವ್ಯತ್ಯಾಸ ನೀ ನೋಡಿಲ್ಲ
ಹಬ್ಬ-ಹರಿದಿನಗಳ ರುಚಿಯು ನೀ ಕಂಡಿಲ್ಲ
ಸದಾ ಪರಿಸರ ರಕ್ಷಣೆಯು ನಿನ್ನ ಹಠ,
ಆಪತ್ತಿನಲ್ಲಿ ಹೆದರದೆ ಮುನ್ನುಗುವ ನಟ
ನೋಡುಗರಿಗೆ ನಿನ್ನದೊಂದು ಕಠೋರ ಸ್ವಭಾವ
ಆದರೆ ಅನಿವಾರ್ಯ, ಪರಿಸರ ರಕ್ಷಣೆಗೆ ಈ ಭಾವ
ಸದಾ ಶ್ರಮಿಸುವ ನಿನ್ನನ್ನು ದೂರುವರು ಜನರು
ಆದರೂ ಬೆಳೆ ನಾಶವಾದಾಗ ನಿನ್ನನ್ನು ನೆನೆಸುವವರು
ನೀನೊಬ್ಬ ಹಸಿರಿನ ಅರಣ್ಯ ಸೇವಕ
ಸಮಾಜದಲ್ಲಿ ಪರಿಸರ ಸಂರಕ್ಷಣೆ ಮಾಡುವ ಧೀಮಂತ ನಾಯಕ…
– ಲಿಂಗರಾಜ ಎಮ್.
ಗದಗ ಜಿಲ್ಲೆ