ಮತ್ತೆ ಬರುವ

ಮತ್ತೆ ಬರುವ

ಮುಸ್ಸಂಜೆಯ ಸೂರ್ಯನಂದ
ಹೇಳಲಾಗದು ಅವನ ಚೆಂದ
ಹತ್ತಿ ಹಣ್ಣಿನಂಥ ಕೆಂಪು
ದುಂಡು ಮುಖದ ಕಾಂತಿ ಸೊಂಪು …

ಮನೆಗೆ ಹೊರಟ ರಾಜನು
ತರಲು ಭರವಸೆಯ ಬೆಳಕನು
ಹೊಸತನದಿ ಮತ್ತೆ ಬರುವ
ದೂಡಲು ಜಗದ ಅಂಧಕಾರವ….

ಬಾಲ್ಯದ ರವಿಯು ಮುಂಜಾನೆಯಲಿ
ಯೌವ್ವನದ ಸೂರ್ಯನು ಮಧ್ಯಾಹ್ನದಲ್ಲಿ
ಮುಪ್ಪಿನ ನೇಸರನು ಮುಸ್ಸಂಜೆಯಲಿ
ನೀಡುವ ಸಂದೇಶವ ಮನೆಮನಗಳಲಿ …

ಏರಿದವನು ಇಳಿಯಲು
ಉರಿದವನು ತಣ್ಣಗಾಗಲು
ಕಾಲ ಚಕ್ರದಿ ಉರುಳಲು
ಸೂರ್ಯನು ನಮಗೆ ಸಾಕ್ಷಿಯಾಗಲು …

           – ಸಂಗಮನಾಥ ಪಿ ಸಜ್ಜನ.
                           ಕಲಬುರಗಿ ಜಿಲ್ಲೆ


Spread the love
error: Content is protected.