ವೃಕ್ಷ ವೈಭವ

ಹಸಿರಿನ ಮಡಿಲಲಿ ಉಸಿರಿಹುದು
ಹಸಿರ ತೋಳಲಿ ಆಶ್ರಯವಿಹುದು
ಹಸಿರಿಂದಲೆ ಜೀವ-ಜಲ ಬೆಳೆವುದು
ಹಸಿರ ಉಳಿಸಲು ಬಾಳು ಹಸನಾಗುವುದು||
ವೃಕ್ಷ ವೈಭವ ಕಣ್ ಸೆಳೆದಿಹುದು
ರೆಂಬೆ ಕೊಂಬೆಗಳ ಸುತ್ತೆಲ್ಲ ಚಾಚಿಹುದು
ಅದೆಷ್ಟು ಜೀವಗಳಿಗೆ ಆಹಾರ ವಿತ್ತಿಹುದು
ಇನ್ನೆಷ್ಟು ಜೀವಿಗಳಿಗೆ ತನ್ನೊಡಲಲಿ ಸಲಹಿಹುದು||
ಅಪಾರ ಉಪಯೋಗದಲಿ ತಾನಿಹುದು
ಗಾಳಿಯನಿತ್ತು ಗಂಧವ ಹರಡಿಹುದು
ಮಳೆ, ಬೆಳೆ ಎಲ್ಲವೂ ನಿನ್ನಿಂದಾಗಿಹುದು
ಪರಿಸರದಾ ಮುಖ್ಯ ಸ್ಥಾನವೆ ಮರಗಿಡಗಳದು||
ಯಾಂತ್ರಿಕತೆಯಲಿ ಕೊಡಲಿ ಪೆಟ್ಟು ಬಿದ್ದಿಹುದು
ಸ್ವಾರ್ಥದಲಿ ಉಪಕಾರಕೆ ಅಪಕಾರವಾಗಿಹುದು
ಕಾಂಕ್ರೀಟ್ ಕಾಡಿನ ಮಧ್ಯೆ ಹಸಿರಿನ ನಾಶವಾಗಿಹುದು
ಬದುಕುಲು ಬಲು ಮುಖ್ಯ ಗಿಡಮರಗಳು ಅರಿತು
ಉಳಿಸಿ ಬೆಳೆಸಬೇಕಿಹುದು||
– ಪ್ರತಿಭಾ ಪ್ರಶಾಂತ
ಉತ್ತರ ಕನ್ನಡ ಜಿಲ್ಲೆ
