ಹಸಿರ_ಹೊ(ಲ)ಳೆ

ಹಸಿರ_ಹೊ(ಲ)ಳೆ

ತುಂತುರುವಿನ ಸಿಂಚನದಿ
ಇಳೆಯೆಲ್ಲ ಹಸಿರು|
ಕೆಸರ ನಡುವಿನ ಕೆಲಸದಿ
ಬಾಯೆಲ್ಲ ಮೊಸರು||

ಬಣ್ಣ ಬಣ್ಣದ ಛತ್ರಿಯಲಿ
ಬಣ್ಣಿಸಲಾಗದ ಭಾವಗಳು|
ರೈತನ ಪರಿಶ್ರಮದಲಿ
ಹಸನಾದ ಹೊಲಗಳು||

ಬಾನು ಭುವಿಯ ಒಲವಿಗೆ
ವರುಣ ಹರಸ ಬಂದಿಹ|
ಉಡಿಸಿ ಹಚ್ಚ ಹಸಿರ ಉಡುಗೆ
ಹೊಸ ಲೋಕ ಸೃಷ್ಟಿ ಮಾಡಿಹ||

ಹಾಳಿ ಮೇಲೆ ಹೆಜ್ಜೆ ಹಾಕಿ
ದೃಷ್ಟಿ ಹಾಯಿಸಿ ಸುತ್ತಲೆಲ್ಲ |
ಕಷ್ಟ ಸುಖದಿ ದಿನವ ನೂಕಿ
ಬೆನ್ನೆಲುಬಾಗಿಹ ದೇಶಕೆಲ್ಲ||

ನೆಲ ಜಲವೆ ಬದುಕು ಕೃಷಿಕಗೆ
ಸ್ವರ್ಗ ಭೂ ತಾಯಿ ಮಡಿಲು|
ರಜಾದಿನಗಳಿಲ್ಲ ದುಡಿಮೆಗೆ
ಉತ್ತು ಬಿತ್ತು ಬೆಳೆಯ ಬೆಳೆಯಲು||

ಪ್ರತಿಭಾ ಪ್ರಶಾಂತ್.
                ಉತ್ತನ ಕನ್ನಡ ಜಿಲ್ಲೆ   


Spread the love
error: Content is protected.