ಮಾಸ ವಿಶೇಷ – ಅತ್ತಿ ಮರ

ಮಾಸ ವಿಶೇಷ – ಅತ್ತಿ ಮರ

                          ©  ಮಹದೇವ ಕೆ. ಸಿ., ಅತ್ತಿ ಮರ , ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Cluster fig
ವೈಜ್ಞಾನಿಕ ಹೆಸರು : Ficus recemosa

ಅತ್ತಿ ಮರವು ಭಾರತ, ಚೀನಾ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮರವಾಗಿದ್ದು, ಸರಿ ಸುಮಾರು 30 ರಿಂದ 35 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಮರದ ತೊಗಟೆಯು  ಕಂದು ಬಣ್ಣದಿಂದ ಕೂಡಿರುತ್ತದೆ.  ಎಲೆಗಳು ಪರ್ಯಾಯವಾಗಿರುತ್ತವೆ ಹಾಗೂ ಎಲೆಗಳ ಮೇಲೆ ಸಣ್ಣ ನಯವಾದ ಕೂದಲಿನ ಆಕಾರದ ರಚನೆಯನ್ನು ಕಾಣಬಹುದು. ಈ ಅತ್ತಿ ಮರದ ವಿಶೇಷತೆಯೇ ಇದರ ಹೂ ಬಿಡುವ ವಿಧಾನ. ಸಾಮಾನ್ಯವಾಗಿ ಎಲ್ಲಾ ಮರಗಳೂ ಪರಾಗಸ್ಪರ್ಶ ಕ್ರಿಯೆಗೆ ಅನುಕೂಲವಾಗುವಂತೆ ಹಕ್ಕಿಗಳನ್ನು, ಕೀಟಗಳನ್ನು, ಚಿಟ್ಟೆಗಳನ್ನು ಆಕರ್ಷಿಸಲು  ಬಣ್ಣ ಬಣ್ಣದ  ಹೂವುಗಳನ್ನು ಬಿಡುತ್ತವೆ. ಆದರೆ ಈ ಅತ್ತಿ ಮರದ ಹೂವುಗಳನ್ನು  ನೋಡಲು ಸಾಧ್ಯವಿಲ್ಲ, ಏಕೆಂದರೆ ಹೂವುಗಳು ನಮಗೆ ಕಾಣುವ ಅತ್ತಿಯ ಹಣ್ಣಿನ ಒಳಗೆ ಇರುತ್ತವೆ. ಇದನ್ನು ಫ್ಲೋರೆಸೆನ್ಸ್ ಎಂದು ಕರೆಯುತ್ತಾರೆ. ಈ ಹಣ್ಣಿನ ಒಳಭಾಗದಲ್ಲಿರುವ ಹೂವುಗಳ ಪರಾಗಸ್ಪರ್ಶ ಕ್ರಿಯೆಗೆ ಒಂದು ಪ್ರಭೇದದ ಕಣಜಗಳು ಸಹಾಯ ಮಾಡುತ್ತದೆ. ನಂತರ ಅತ್ತಿ ಕಾಯಿಗಳ ಬಣ್ಣ ಬದಲಾಗಿ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಈ ಬಣ್ಣ ಬದಲಾಯಿಸುವುದು ಪಕ್ಷಿಗಳನ್ನು ಆಕರ್ಷಿಸಲು ಮತ್ತು ಇದು ತಮ್ಮ ಬೀಜ ಪ್ರಸರಣೆಗೆ ಮರಗಳು ಅಳವಡಿಸಿಕೊಂಡಿರುವ ತಂತ್ರವಾಗಿದೆ. ಹಾಗಾಗಿ ಈ ಅತ್ತಿ ಹಣ್ಣು ಬಿಡುವ ಸಮಯದಲ್ಲಿ ಹಲವಾರು ಪ್ರಭೇದದ ಪಕ್ಷಿಗಳನ್ನು ನೋಡಬಹುದು. ಸಂಜೆ ಸಮಯ ಬಾವಲಿಗಳೂ ಸಹ ಈ ಅತ್ತಿ ಹಣ್ಣನ್ನು ತಿನ್ನಲು ಬರುತ್ತವೆ. ವಿಶ್ವದಲ್ಲಿ ಸುಮಾರು 750 ಪ್ರಭೇದದ  ಹತ್ತಿ ಕುಟುಂಬದ ಮರಗಳನ್ನು ಕಾಣಬಹುದು ಹಾಗೂ ಪ್ರತಿ ಮರಕ್ಕೂ ತನ್ನದೇ ಆದ ಕಣಜಗಳ ಪ್ರಭೇದಕ್ಕೆ ಸೇರಿದ ಕೀಟಗಳು  ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಅತ್ತಿ ಮತ್ತು ಕಣಜಗಳ ಸಂಬಂಧ ಬಲು ರೋಚಕ. ಅತ್ತಿ ಮರದ ಬಗ್ಗೆ ಇನ್ನಷ್ಟು ತಿಳಿಯಲು https://kaananamag.in/?p=3867 ಲಿಂಕ್ ಅನ್ನು ಕ್ಲಿಕ್ ಮಾಡಿ.

Spread the love
error: Content is protected.