ನಿಸರ್ಗ ಮಾತೆ
ಹಸಿರ ಉಟ್ಟ ಭೂಮಿತಾಯೇ
ಉಸಿರ ಕೊಟ್ಟು ಬದುಕಿಸುವ ಮಾಯೇ
ಏನಿಂಥ ಮಮಕಾರ
ನಮ್ಮ ಮೇಲೆ
ನಿನ್ನ ಮಡಿಲಲಿ ನಾ ಮಗುವಾದೆ
ಒಂದಿನಿತು ಸ್ವಾರ್ಥವಿಲ್ಲ
ಏನೊಂದು ವ್ಯರ್ಥವಿಲ್ಲ
ಏನಿಂಥ ಸಾಕಾರ
ನಿನ್ನ ಲೀಲೆ
ನೀ ನಮ್ಮ ಮೊಗದ ನಗುವಾದೆ
ನೋಡಿದಷ್ಟು ಸೊಗಸಿದೆ
ಅರಿತಷ್ಟು ಅರಿಯುವುದಿದೆ
ಏನಿಂಥ ಆಕಾರ
ನೀ ನಮ್ಮ ಪಾಠಶಾಲೆ
ನೀ ನನ್ನ ಕಲಿಕೆಯ ಜಗವಾದೆ
ಅಗಣಿತ ಸಂಪದ್ಭರಿತವು
ಅನುಕ್ಷಣವು ಅಕ್ಷಯವು
ಏನಿಂಥ ಸಹಕಾರ
ಮನುಕುಲದ ಮೇಲೆ
ನಿನ್ನ ಆಶೀರ್ವಾದವ ಕಂಡು ನಾ ಧನ್ಯನಾದೆ
-ಜನಾರ್ಧನ್ ಎಂ. ಎನ್