ಮಾಸ ವಿಶೇಷ – ಶ್ರೀಗಂಧ

ಮಾಸ ವಿಶೇಷ – ಶ್ರೀಗಂಧ

© ಚಂದನ್, ಶ್ರೀಗಂಧ,ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Sandalwood
ವೈಜ್ಞಾನಿಕ ಹೆಸರು : Santalum album

ನಮ್ಮ ಕನ್ನಡ ನಾಡು ಕರ್ನಾಟಕ ಗಂಧದ ಬೀಡು, ಇಲ್ಲಿ ಗಂಧದ ಮರ ಹೇರಳವಾಗಿ ಸಿಗುತ್ತಿತ್ತಾದ ಕಾರಣ ಇದನ್ನು ನಮ್ಮ ರಾಜ್ಯದ ಮರ ಎಂದು ಕರೆಯುತ್ತೇವೆ. ಆದರೆ ಇಂದು ಕರ್ನಾಟಕದಲ್ಲೇ ಗಂಧದ ಮರ ವಿರಳವಾಗಿರುವುದು ವಿಪರ್ಯಾಸವೇಸರಿ.. ಸ್ಯಾಂಟಾಲಂ ಪ್ರಭೇದಕ್ಕೆ ಸೇರಿದ ಮದ್ಯಮ ಗಾತ್ರದ ಈ ಮರ, ಅರೆಪರಾವಲಂಬಿ ಮರವಾಗಿದ್ದು ಇದೇ ಪ್ರಭೇದದ ಹಲವುಮರಗಳು ಭಾರತ, ಅಸ್ತ್ರೇಲಿಯಾ, ಇಂಡೋನೇಶಿಯಾ ಗಳಲ್ಲಿ ಕಂಡುಬರುತ್ತವೆ. ವರ್ಷಪೂರ್ತಿ ಹೂ ಬಿಟ್ಟರೂ ಹೂವು ಪರಿಮಳ ಸೂಸುವುದಿಲ್ಲ. ಆದರೆ ಪೂರ್ಣಪ್ರಮಾಣದಲ್ಲಿ ಬೆಳೆದ ಮೇಲೆ ಹಲವು ವರ್ಷಗಳ ಕಾಲ ತನ್ನ ಪರಿಮಳವನ್ನ ಉಳಿಸಿಕೊಳ್ಳುವ ಕಾರಣಕ್ಕಾಗಿ ಈ ಮರವನ್ನು ಕಲಾ ಕೆತ್ತನೆ, ಸೋಪು ಹಾಗೂ ವರ್ಧಕಗಳ ತಯಾರಿಕೆಯಲ್ಲಿ ಹಾಗೂ ವೈದ್ಯಕೀಯ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಬಳಸುತ್ತಾರೆ.

Spread the love
error: Content is protected.