ಮಳೆ
ಓ ಮಳೆಯೇ ಓ ಮಳೆಯೇ
ಮೇಘದಿ ಇಳಿದೆ ನೀ ಧರೆಗೆ
ಬಿಸಿಲ ಜಳಕ ಬೆಂದ ಜೀವಕೆ
ನೀರೆರೆದು ದಾಹ ತಿರಿಸಿದೇ
ಗಿರಿ ಶಿಖರಗಳಲ್ಲಿ ಸುರಿದ ಮಳೆಗೆ
ತರುಲತೆಗಳು ಹೋನಕೆ ಸುರಿದು
ಹಕ್ಕಿಗ¼ÀÄ ಸಂತಸದಿ ರೆಕ್ಕೆ ಬಿಚ್ಚಿದೆ
ಜಿಗಿದು ಕುಣಿಯುತ್ತಿದೆ ಆಸೆಗೆ
ಪ್ರಕೃತಿಯ ಸೊಬಗು ಹೆಚ್ಚಿದೆ
ಭುವಿಗೆ ಮಳೆಯು ಮುತ್ತಿಕ್ಕುತಿದೆ
ಘತಾದಿಂದ ನೀರು ಧುಮುಕುತ್ತ
ಹರಿಯುತ್ತಾ ನದಿಗೆ ಸೇರಿದೆ
ಮೃಗಗಳು ಕುಣಿದು ಕುಪ್ಪಳಿಸಿ
ಮಳೆಯಲ್ಲಿ ನೆನೆದು ಮಿಂ¢ದೆ
ತಂಗಾಳಿಯು ಮಳೆಯ ಸ್ಪರ್ಶಿಸಿ
ಸಸ್ಯಕಾಶಿ ಸಿರಿ ಇಮ್ಮಡಿಯಾಗಿದೆ
ಕಾಮನಬಿಲ್ಲು ಆಗಸವನ್ನು ರಂಗೇರಿದೆ
ಕೋಗಿಲೆಯು ನಾದಸ್ವರ ನುಡಿದಿದೆ
ಹಸಿರಿನ ಮೊಳಕೆಯು ಚಿಗುರೊಡೆದಿದೆ
ಇಬ್ಬನಿಯು ಮುತ್ತಿನಂತೆ vÉÆಟಕುತ್ತಿದೆ
ನವಿಲುಗಳ ಉಲ್ಲಾಸದ ನರ್ತನೆ ಚಂದ
ಉಷಕಾಲದ ಆರ್ಭಟನೆ ಅಂದ
ಭುವಿಯಲ್ಲಿ ಸ್ವರ್ಗವನ್ನು ಅನುಭವಿಸು
ನೀ ಕಾಡಿನ ಕೂಸು
-ಶುಭ ವಿ.
ಬೆಂಗಳೂರು ಜಿಲ್ಲೆ