ಮಾಸ ವಿಶೇಷ – ಮುಳ್ಳು ಬೂರುಗ

ಮಾಸ ವಿಶೇಷ – ಮುಳ್ಳು ಬೂರುಗ

©ನಾಗೇಶ್ ಓ ಎಸ್, ಮುಳ್ಳು ಬೂರುಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ವೈಜ್ಞಾನಿಕ ಹೆಸರು : Bombax celba
ಇಂಗ್ಲೀಷ್ ಹೆಸರು : Red silk-cotton tree

ಕೆಂಪು ಬೂರುಗ ಮರದ ಮೂಲ ಭಾರತ, ಏಷ್ಯಾದ ದಕ್ಷಿಣ ಉಷ್ಣವಲಯ, ಉತ್ತರದ ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಉಷ್ಣವಲಯದಲ್ಲಿ ಇದರ ಹಂಚಿಕೆ. ಇದರ ತೊಗಟೆ ಬೂದು ಬಣ್ಣ ಹೊಂದಿದ್ದು, ಎಳೆಯದಾಗಿದ್ದಾಗ ನಯವಾಗಿರುತ್ತದೆ ಮತ್ತು ಅದರ ಕೆಳ ಕಾಂಡದ ಮೇಲೆ ಶಂಕುವಿನಾಕಾರದ ಮುಳ್ಳುಗಳನ್ನು ಹೊಂದಿರುತ್ತದೆ; ಲಘುವಾದ ಬಿರುಕುಗಳೊಂದಿಗೆ ಸ್ವಲ್ಪಮಟ್ಟಿಗೆ ಒರಟಾಗಿರುತ್ತದೆ; ಮರಕ್ಕೆ ವಯಸ್ಸಾದಂತೆ ಮುಳ್ಳುಗಳು ನಿಧಾನವಾಗಿ ಬೀಳುತ್ತವೆ. ಐದು ಎಲೆಗಳ ಗುಚ್ಛವನ್ನು ಹೊಂದಿದ್ದು, ಅಪರೂಪವಾಗಿ ಆರು ಅಥವಾ ಏಳು ಎಲೆಗಳನ್ನು ಹೊಂದಿರುತ್ತವೆ.  ಪ್ರತಿಯೊಂದು ಎಲೆಗೂ ತಮ್ಮದೇ ಆದ ಸಣ್ಣ ಉಪ-ಕಾಂಡಗಳನ್ನು ಹೊಂದಿದ್ದು ಎಲೆಗಳು ನಯವಾಗಿರುತ್ತವೆ. ಈ ಕೆಂಪು ಬೂರುಗ ತುಂಬಾ ವೇಗವಾಗಿ ಬೆಳೆಯುವ ಮರವಾಗಿದ್ದು,  ಇದರ ಸುತ್ತಳತೆ ಎರಡರಿಂದ ಮೂರು ಮೀಟರ್ ಇದ್ದು, ಸುಮಾರು 30 ಮೀಟರ್ ಎತ್ತರದವರೆಗೂ ಬೆಳೆಯುತ್ತದೆ. ಬೂರುಗದ ಮರದಲ್ಲಿ ಜನವರಿಯಿಂದ ಮಾರ್ಚ್ ವರೆಗೆ ಸುಂದರವಾದ ಕೆಂಪು ಬಣ್ಣದ ಹೂವುಗಳನ್ನು ಬಿಡುತ್ತವೆ. ಇದರ ಕಾಯಿಗಳು ಹಸಿರು ಬಣ್ಣದಿಂದ ಕೂಡಿದ್ದು, ಬಲಿತಾಗ ಒಳಗೆ ಹತ್ತಿಯಿರುತ್ತದೆ. ಈ ಹತ್ತಿಯನ್ನು ಸಂಗ್ರಹಿಸಿ ದಿಂಬು ಇತ್ಯಾದಿ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ. ಮತ್ತೆ ಇದರ ಎಳೆಯ ಕಾಯಿಯನ್ನು ಬೇಯಿಸಿ ತಿನ್ನಲು ಬಳಸುತ್ತಾರೆ ಹಾಗು ಉಪ್ಪಿನಕಾಯಿ ಮಾಡಲು ಬಳಸುತ್ತಾರೆ. ಈ ಮರವನ್ನು ಕಟ್ಟಡದ ಕೆಲಸಗಳಲ್ಲಿ ಬಳಸಲಾಗುತ್ತದೆ, ಪ್ಲೈವುಡ್, ಬೆಂಕಿಪೊಟ್ಟಣ, ಗೊಂಬೆ ಮತ್ತು ದೋಣಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಹೂವಿನ ಭಾಗಗಳಿಂದ ಮಸಾಲೆಯುಕ್ತ ನೂಡಲ್ ಸೂಪ್ ಮಾಡಲು ಥೈಲ್ಯಾಂಡ್ ಪಾಕಪದ್ಧತಿಯಲ್ಲಿ ಉಪಯುಕ್ತ. ನಮ್ಮಲ್ಲಿ ಪಲಾವ್ ಅನ್ನದಲ್ಲಿ ಇದರ ಮೊಗ್ಗನ್ನು ಬಳಸುತ್ತೇವೆ.

Spread the love
error: Content is protected.