ಮಾಸ ವಿಶೇಷ – ಅಂಕೋಲೆ ಮರ

         © ಅಶ್ವಥ .ಕೆ .ಎನ್, ಅಂಕೋಲೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Sage Leaved Alangium
ವೈಜ್ಞಾನಿಕ ಹೆಸರು : Alangium salviifolium

ಅಂಕೋಲೆ ಮರದ ಮೂಲ ಪಶ್ಚಿಮ ಆಫ್ರಿಕಾ.  ಉಷ್ಣವಲಯದ ಆಸ್ಟ್ರೇಲಿಯಾ, ಪಶ್ಚಿಮ ಪೆಸಿಫಿಕ್ ಸಾಗರ ದ್ವೀಪಗಳು, ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಹಾಗು ನಮ್ಮ ಭಾರತದ ಉಪಖಂಡದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಹೆಚ್ಚಾಗಿ ಬಯಲು ಪ್ರದೇಶ ಮತ್ತು ಬೆಟ್ಟ-ಗುಡ್ಡಗಳು ಹಾಗೂ ಶುಷ್ಕ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇವುಗಳ ಕೊಂಬೆಗಳು ಬೂದು ಮತ್ತು ಕಂದು ಬಣ್ಣದಿಂದ ಕೂಡಿದ್ದು, ಗಿಡ್ಡ ಕೊಂಬೆಗಳ್ಳುಳ್ಳ ಮೊನಚಾದ ಮುಳ್ಳುಗಳಾಗಿ ಅಂತ್ಯಗೊಳ್ಳುತ್ತವೆ. ಉದ್ದನೆಯ ಮಿರುಗುವ ಎಲೆಗಳ ಮೇಲೆ ಅಲ್ಲಲ್ಲಿ ಗಂಟುಗಳಿದ್ದು, ಎಲೆಯ ಬುಡದಲ್ಲಿ ಅಡ್ಡಮಗ್ಗುಲಾದ ಜೋಡಿ ನರಗಳಿಂದ ಕೂಡಿರುತ್ತದೆ. ಈ ಮರಗಳು 20 ಮೀ ಎತ್ತರದವರಿಗೆ ಬೆಳೆಯುತ್ತವೆ. ಹೂವು-ಮೊಗ್ಗುಗಳು ತಿಳಿ ಹಸಿರು ಬಿಳಿ ಬಣ್ಣದಿಂದ ಕೂಡಿದ್ದು, ಎರಡರಿಂದ ಮೂರು ಸೆಂಟಿಮೀಟರ್ ಉದ್ದ ಬೆಳೆಯುತ್ತವೆ. ತೆಳುವಾದ ಪುಷ್ಪದಳಗಳನ್ನು ಹೊಂದಿದೆ, ಹಿಂದಕ್ಕೆ ಬಾಗಿರುತ್ತವೆ. ಬಿಳಿಬಣ್ಣದ ಕೇಸರಗಳನ್ನು ಹೊಂದಿದೆ. ಎಲೆಗಳು 13 ಸೆಂ.ಮೀ.ವರೆಗಿನ ಉದ್ದವಿದ್ದು, ತಿಳಿ ಮತ್ತು ಗಾಡವಾದ ಹಸಿರು ಬಣ್ಣದಿಂದ ಕೂಡಿರುತ್ತವೆ. ತೊಗಟೆ ತೆಳು ಕಂದು ಬಣ್ಣದಲ್ಲಿರುತ್ತವೆ. ಆಯುರ್ವೇದದಲ್ಲಿ ಇದರ ಬೇರುಗಳು ಮತ್ತು ಹಣ್ಣುಗಳನ್ನು ಬಳಸಲಾಗುತ್ತದೆ. ಇದರ ತೊಗಟೆಯನ್ನು ನಾಟಿ ಔಷಧವಾಗಿ, ಚರ್ಮದ ಸಮಸ್ಯೆಗಳಲ್ಲಿ, ಮೊಲ, ಇಲಿ, ನಾಯಿ ಮತ್ತು ಹಾವು ಕಚ್ಚಿದಾಗ ಇದನ್ನು ಬಳಸಲಾಗುತ್ತದೆ.

Spread the love
error: Content is protected.