ಮಾಸ ವಿಶೇಷ – ಗೌರಿ ಹೂ

ಮಾಸ ವಿಶೇಷ – ಗೌರಿ ಹೂ

©ಡಬ್ಲ್ಯೂ ಸಿ ಜಿ, ಗೌರಿ ಹೂ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Flame Lily
ವೈಜ್ಞಾನಿಕ ಹೆಸರು : Gloriosa superba

ಗೌರಿ ಹೂ ಆಫ್ರಿಕಾದಲ್ಲಿ ಮತ್ತು ವಿಶ್ವದ ಪೂರ್ವ ದೇಶಗಳ ಆಗ್ನೇಯ ಭಾಗಗಳಲ್ಲಿ ಬೆಳೆಯುವ ಒಂದು ಸುಂದರವಾದ ಬಳ್ಳಿ. ಈ ಪುಷ್ಪವು ಜಿಂಬಾಬ್ವೆ ದೇಶದ ರಾಷ್ಟ್ರೀಯ ಹೂವು ಕೂಡ. ಇದನ್ನು ಇಂಗ್ಲೀಷ್ ನಲ್ಲಿ Flame Lily, ವೈಜ್ಞಾನಿಕವಾಗಿ Gloriosa Superba ಎಂದು ಕರೆಯುವರು. ಹೆಸರೇ ಹೇಳುವಂತೆ ಈ ಹೂವು ಗ್ಲೋರಿಯಸ್ಸಾಗಿ ಮತ್ತೆ ಸೂಪರಾಗಿ ಅಂದರೆ ಅದ್ಭುತವಾಗಿ ಇದೆ. ಈ ಗಿಡ ಗೌರಿ ಮಾಸದಲ್ಲಿ ಹೂಬಿಡುವುದರಿಂದ ಇದಕ್ಕೆ ಗೌರಿ ಹೂವು ಎಂದು ಕನ್ನಡದಲ್ಲಿ ಕರೆಯುವರು. ಇದರ ಹೂಗಳು ಸುಂದರವಾದ ಹಳದಿಯ ಅಂಚುಗಳಿಂದ ಕೂಡಿದ ಕೆಂಪು ಮತ್ತು ಹಳದಿ ಬಣ್ಣದ ಅಥವಾ ನೇರಳೆ ಬಣ್ಣದ ಹೂಗಳಾಗಿದ್ದು, ಅವು ಜುಲೈನಿಂದ ಅಕ್ಟೋಬರ್ ತಿಂಗಳಿನಲ್ಲಿ ಮೂಡುತ್ತವೆ. ಗೌರಿಗಿಡ ತಿಳಿಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ನಾಲ್ಕು ಮೀಟರ್ ಉದ್ದ ಬೆಳೆಯುತ್ತದೆ, ಕಾಂಡವೂ ಕೂಡ ಹಸಿರು ಬಣ್ಣವನ್ನು ಹೊಂದಿರುತ್ತದೆ. ಗೌರಿಗಿಡವು ಅತ್ಯುನ್ನತ ಔಷಧೀಯ ಸಸ್ಯವಾಗಿದ್ದು  ಹಸಿ ಗಾಯಗಳು, ಹುಣ್ಣುಗಳು, ಚೇಳು ಮತ್ತು ಹಾವು ಕಡಿತ, ಸಂಧಿವಾತ, ಕಾಲರಾ, ಮೂತ್ರಪಿಂಡದ ಸಮಸ್ಯೆ, ತುರಿಕೆ, ಕುಷ್ಠರೋಗ, ಮೂಲವ್ಯಾಧಿ,  ಕ್ಯಾನ್ಸರ್, ದುರ್ಬಲತೆ, ಸಿಡುಬು ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ.

Spread the love
error: Content is protected.