ಮಾಸ ವಿಶೇಷ – ಎದ್ರಾಣಿ

ಮಾಸ ವಿಶೇಷ – ಎದ್ರಾಣಿ

© ಡಬ್ಲ್ಯೂ ಸಿ ಜಿ, ಎದ್ರಾಣಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Ceylon Boxwood
ವೈಜ್ಞಾನಿಕ ಹೆಸರು:Psydrax dicoccos

ಎದ್ರಾಣಿ Psydrax dicoccos (ಸಿಲೋನ್ ಬಾಕ್ಸ್ ವುಡ್) ಎಂಬ ಕನ್ನಡ ಮತ್ತು ಇಂಗ್ಲೀಷಿನ ಸಾಮಾನ್ಯ ಹೆಸರು. ಸಿಲೋನ್ ಬಾಕ್ಸ್ ವುಡ್ ಹೆಸರೇ ಹೇಳುವಂತೆ ಇದರ ಮೂಲ ಶ್ರೀಲಂಕಾ. ಭಾರತದ ಉಷ್ಣವಲಯ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡು ಬರುತ್ತದೆ. ಸುಮಾರು ಐದು ಮೀಟರ್ ಎತ್ತರ ಬೆಳೆಯುತ್ತದೆ. ಬೊಡ್ಡೆ ಗಟ್ಟಿಮುಟ್ಟಾಗಿ ಗಾಢ ಕಂದು ಬಣ್ಣಕ್ಕಿದ್ದು, ಲಂಬವಾದ ಬಿರುಕುಗಳು ಇವೆ. ಸರಳ ಎಲೆಗಳು ಎದುರುಬದುರಾಗಿದ್ದು, ತೊಟ್ಟುಗಳ ನಡುವೆ ಹುರುಪೆಗಳಿರುತ್ತವೆ. ಸಣ್ಣ ಬಿಳಿ ಪರಿಮಳಯುಕ್ತ ಹೂಗಳನ್ನು ಹೊಂದಿರುತ್ತವೆ. ಹಣ್ಣಿನಲ್ಲಿ ಕಪ್ಪು ಬಣ್ಣದ ತಿರುಳಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿ ಮಾಸಗಳಲ್ಲಿ ಚಿಟ್ಟೆ, ಜೇನು ನೊಣ ಮತ್ತು ಹಕ್ಕಿಗಳಿಂದ ಪರಾಗಸ್ವರ್ಷಗೊಳ್ಳುತ್ತದೆ.

Spread the love
error: Content is protected.