ಮೋಡಗಳು
ಆಕಾಶದ ಕಡಲಲ್ಲಿ ಅಲೆಯುತಿಹ
ಮೋಡಗಳು
ವಿಶ್ವ ಸುಂದರಿಯಂತೆ ಮಿನುಗುವುದೇಕೆ..?
ಕತ್ತಲೆಯ ಕಾರ್ಮುಗಿಲು ಗುಡು-ಗುಡಿಸಿ ಮಳೆತಂದು
ಆಗೊಮ್ಮೆ ಈಗೊಮ್ಮೆ ನಿಲ್ಲುವುದೇಕೆ…?
ಸೂರ್ಯನನೇ ಮರೆಮಾಡಿ
ತಂಪುಗಾಳಿ ಬರಮಾಡಿ
ದೂರಾತಿ ದೂರಕ್ಕೆ ಸರಿಯುವುದೇಕೆ..?
ಬಿರು ಬಿಸಿಲ ಝಳ ಮುಗಿದು ಮುಂಗಾರಿನ ಆರಂಭಕ್ಕೆ
ನಿನ್ನ ನೋಡಿ ಕಪ್ಪೆಗಳು ಕೂಗುವುದೇಕೆ…?
ಪುಟ್ಟ ಮನದ ಹೃದಯದಲ್ಲಿ ಎಷ್ಟು ದೊಡ್ಡ ಬೆಣ್ಣೆಯೆಂದು ಅಮ್ಮನನ್ನು ಕರೆಯುವಂತೆ ಮಾಡುವಿಯೇಕೆ…?
ಆಗಸದಿ ನಿನ್ನ ಆಟ ರೈತನಿಗೆ ವಿಧಿಯ ಪಾಠ ಯಾವ ರೀತಿ ಕಲಿಸಲೆಂದು
ನೋಡುವಿಯೇಕೆ…?
ಗಿಡಗಳೆಲ್ಲಾ ಸೊರಗಿನಿಂತು ಭೂಮಿಯೆಲ್ಲಾ ಬರಡಾಗಿ
ನೀರಿಗಾಗಿ ಬೇಡುವಾಗ ಓಡುವಿಯೇಕೆ ಮೋಡ ನೀ ಓಡುವಿಯೇಕೆ..?
–ನಂದಕುಮಾರ್ ಹೊಳ್ಳ .ಎಸ್.
ಪಾಂಡೇಶ್ವರ, ಸಾಸ್ತಾನ.