ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

            ©ಕೆ. ಎಸ್. ಶ್ರೀನಿವಾಸ್,  ಕಾಗದ ಕಣಜ  

ಎಲೆ-ತೊಗಟೆಗಳನ್ನೇ ಅಗಿದು ಕಾಗದದ ಮನೆಕಟ್ಟಿ ಬದುಕುವ ಸಂಘ ಜೀವಿಗಳು ನಾವು. ನೀವು ಕಾಗದವನ್ನು ಕಂಡುಕೊಳ್ಳುವ ಮೊದಲೇ ಕಾಗದದ ಗೂಡು ಕಟ್ಟಿ ಮೊಟ್ಟೆಯಿಟ್ಟು ಸಂಸಾರ ಸಾಗಿಸಿದ್ದೆ. ಎಷ್ಟೇ ಜಡಿಮಳೆ ಬಂದರು ಒಂದು ಹನಿ ನೀರು ನಮ್ಮ ಮನೆಯಲ್ಲಿ ಸೋರುವುದಿಲ್ಲ ಅಂತಹ ವಾಟರ್ ಪ್ರೂಫ್ ಪೇಪರ್‌ನ್ನು ನಾವು ತಯಾರಿಸುತ್ತೇವೆ. ನಮ್ಮ ಮನೆ ನಿಮ್ಮ ಮನೆಗಿಂತ ಕಲಾತ್ಮಕವಾಗಿದೆ.

©ಶ್ರೀನಿವಾಸ್ ಕೆ. ಎಸ್, ಪಚ್ಚೆ ಕಡಜ

ಕಡು ಪಚ್ಚೆಯಂತೆ ಪಳ-ಪಳ ಹೊಳೆಯುವ ಕಡು ನೀಲಿ ಬಣ್ಣದ ಕಡಜ ನಾನು. ಬೇಸಿಗೆಯ ಬಿಸಿಯ ವಾತಾವರಣದಲ್ಲಿ ನನ್ನ ಓಡಾಟ ಜಾಸ್ತಿ. ಕೋಗಿಲೆ ಹೇಗೆ ಕಾಗೆ ಗೂಡಲ್ಲಿ ಮೊಟ್ಟೆ ಇಡುತ್ತೋ ಅದೇ ರೀತಿ ನಾನು ನನ್ನ ಸಂಬಂಧಿಗಳ ಗೂಡಲ್ಲಿ ಮೊಟ್ಟೆ ಇಡುತ್ತೇನೆ. ಉಳಿದಂತೆ ನನ್ನ ಮಕ್ಕಳು ಹುಟ್ಟಿದ ತಕ್ಷಣ ನನ್ನ ಸಂಬಂಧಿಗಳ ಮಕ್ಕಳನ್ನು ಮುಗಿಸುತ್ತಾರೆ. ನಾನು ಒಂಟಿ ಜೀವಿ ದೊಡ್ಡ ಕಣ್ಣುಳ್ಳ ನಮಗೆ ತೇವಯುಕ್ತ ಮರಳು ಮಣ್ಣು ಇಷ್ಟ.

©ಶ್ರೀನಿವಾಸ್ ಕೆ. ಎಸ್, ಬೆಂಕಿ ದುಂಬಿ

ನನ್ನ ತಂಟೆಗೆ ಬಂದ್ರೆ ಜೋಕೆ ! ಸೆಂಟಾರಿಡಿನ್ ವಿಷ ಬಿಟ್ಟು ಬೊಬ್ಬೆ ಬರಿಸುತ್ತೀನಿ. ಒಂಟಿಯಾಗಿ ಬದುಕೋ ನನಗೆ ತೊಂದ್ರೆ ಕೊಡಬೇಡಿ ಪ್ಲೀಸ್. ಆಗಾಗ ಸ್ವಲ್ಪ ಮಿಡತೆ ಮೊಟ್ಟೆಗಳನ್ನು ಗುಳುಂ ಮಾಡ್ತೀನಿ. ಜೇನು ಹುಳುಗಳು ಕಂಡ್ರೆ ನನಗೆ ಪಂಚಕಜ್ಜಾಯದಂತೆ. ಹೂಗಳ ಹತ್ತಿರ ಕುಳಿತು ಜೀನುಹುಳುಗಳಿಗಾಗಿ ಕಾದು ಬೇಟೆಯಾಡಿ ತಿನ್ನುವ ಮಹಾನ್ ಬೇಟೆಗಾರ ನಾನು.

                                                            ©ಶ್ರೀನಿವಾಸ್ ಕೆ. ಎಸ್, ಬಣ್ಣದ ದುಂಬಿ    

ಮುಂಗಾರು ಮಳೆಗೆ ಭೂಮಿಯೇ ಬಣ್ಣಮಯ! ಧರೆಗೆ ಉದುರುವ ಹನಿ ಹನಿ ನೀರು ನಮಗೆ ಬಣ್ಣಕೊಡುವ ಕಲೆಗಾರ. ಭೂಮಿಯ ಯಾವುದೆ ಕೊಳೆತ ತಿಪ್ಪೆಯ ಸಗಣಿ ಮಣ್ಣಿನಲ್ಲಿ ಇರುವ ಲಾರ್ವಾ – ಪ್ಯೂಪೆಯಾಗದ ಈ ವರ್ಣ ವೈವಿಧ್ಯ ನೀನಿರುವ ಸುತ್ತಮುತ್ತ ಹುಡುಕಿ ನೋಡು. ನಮ್ಮ ವಂಶದ ನಿಜ ಗತ್ತು ತಿಳಿಯುತ್ತೆ ನಿನಗೆ.

ಚಿತ್ರಗಳು:ಶ್ರೀನಿವಾಸ್ ಕೆ. ಎಸ್.
ವಿವರಣೆ: ಶಂಕರಪ್ಪ .ಕೆ .ಪಿ

Spread the love
error: Content is protected.