ಮಾಸ ವಿಶೇಷ – ಅರಿಶಿನ ಬೂರುಗ
©ಅಶ್ವಥ ಕೆ ಎನ್, ಅರಿಶಿನ ಬೂರುಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು : Silk Cotton Tree or Buttercup Tree
ವೈಜ್ಞಾನಿಕ ಹೆಸರು : Cochlospermum religiosum
ದಕ್ಷಿಣ ಪ್ರಸ್ಥಭೂಮಿಯ ಶುಷ್ಕಎಲೆ ಉದುರುವ ಕಾಡುಗಳ ಕಲ್ಲು ಬಂಡೆಗಳ ಆವಾಸಗಳಲ್ಲಿ ಸುಮಾರು 7.5 ಮೀಟರ್ ಎತ್ತರಕ್ಕೆ ಬೆಳೆಯುವ ಸಣ್ಣ ಮರವಾಗಿದೆ. ಇವುಗಳು ಕಲ್ಲುಬಂಡೆಗಳ ಆವಾಸಗಳಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ಕೆಲ ಜಾಗಗಳಲ್ಲಿ ಪ್ರಾದೇಶಿಕವಾಗಿ ಕಲ್ಲುಬೂರುಗ ಎಂತಲೂ ಕರೆಯುವುದುಂಟು. ಇದರ ಇಂಗ್ಲೀಷಿನ ಸಾಮಾನ್ಯ ಹೆಸರು ಬಟರ್ ಕಪ್ಸ್ (ಬೆಣ್ಣೆಚಿಪ್ಪು/Buttercups) ಎಂದು, ಏಕೆಂದರೆ ಇದರ ಪ್ರಕಾಶಮಾನವಾದ ಹಳದಿ ಹೂಗಳು ದೊಡ್ಡ ಗಾತ್ರದ ಬೆಣ್ಣೆಚಿಪ್ಪುಗಳಂತೆ ಕಾಣುತ್ತವೆ. ಇದರ ಎಲೆಗಳು ಕುಂಬಳ ಗಿಡದ ಎಲೆಯಂತೆಯೇ ಹಾಳೆ(lobed)ಗಳಿಂದ ಕೂಡಿರುತ್ತವೆ. ಇದರ ಬೀಜಗಳಿಂದ ತೆಗೆದ ಎಣ್ಣೆ ಮತ್ತು ಅಂಟುಗಳಿಂದ ಕೇಕ್ ಮತ್ತು ಐಸ್ಕ್ರೀಮ್ ಮಾಡಲು ಬಳಸಬಹುದು.