ಪ್ರಕೃತಿ ಬಿಂಬ

©ಸುಮುಖ ಜಾವಗಲ್ .ಎನ್, Green Lipped Dendrobium
ಪರಾವಲಂಬಿ ಸಸ್ಯದಂತೆ ಮರಗಳ ಮೇಲೆ ಬೆಳೆಯುವ ಈ ಸುಂದರ ಆರ್ಕಿಡ್ ಹೂಗಿಡ ಪಶ್ಚಿಮ ಘಟ್ಟ ಮತ್ತು ತಮಿಳುನಾಡಿನ ಕೆಲ ಭಾಗಗಳಲ್ಲಿ ಮಾತ್ರ ಕಂಡು ಬರುತ್ತವೆ. ಈ ಗಿಡ ನವೆಂಬರ್ ನಿಂದ ಫೆಬ್ರವರಿ ತಿಂಗಳವರೆಗೂ ಹೂ ಬಿಡುತ್ತದೆ.

©ಸುಮುಖ ಜಾವಗಲ್ .ಎನ್, Single Leaved Habenaria
ಎತ್ತರದ ಘಟ್ಟ ಪ್ರದೇಶದ ಹುಲ್ಲುಗಾವಲಿನಲ್ಲಿ ಕಂಡುಬರುವ ಹಸಿರು ಹುಲ್ಲಿನಲ್ಲಿ ಹಚ್ಚಬಿಳಿಯ ಈ ಸೀತಾಳಿ ಹೂಗಳನ್ನು ನೋಡುವುದೇ ಚಂದ. ಈ ಗಿಡ ಮುಂಗಾರಿನ ಆರಂಭದಲ್ಲೇ ಹೂ ತಳೆದು ಜೂನ್-ಜುಲೈ ತಿಂಗಳವರೆಗೂ ಹೂ ಕಾಣಿಸಿಗುತ್ತದೆ.

©ಸುಮುಖ ಜಾವಗಲ್ .ಎನ್, Small Bearded Dendrobium
ಭಾರತದ ಪಶ್ಚಿಮ ಭಾಗದಲ್ಲಿ ಈ ಪ್ರಭೇದದ ಹೂ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ 1500 ಮೀ ಎತ್ತರದ ಪರ್ವತ ಪ್ರದೇಶದಲ್ಲಿ ನೋಡಬಹುದು. ಸೂರ್ಯನ ಬೆಳಕು ಯಥೇಚ್ಚ ಸಿಗುವ ಕಡೆ ಇರುವ ಸಣ್ಣಸಣ್ಣ ಗಿಡ ಮರಗಳ ಮೇಲೆ ಬೆಳೆಯುತ್ತದೆ. ನೋಡಲು ಸುಂದರವಾಗಿರುವ ಈ ಹೂವಿಗೆ ಯಾವುದೇ ಸುಗಂಧ ಇಲ್ಲ!

©ಸುಮುಖ ಜಾವಗಲ್ .ಎನ್, Long Tailed Habenaria
ಈ ಸುಂದರ ಆರ್ಕಿಡ್ ನೀಲಗಿರಿ ಬೆಟ್ಟ ಪ್ರದೇಶದಲ್ಲಿ ಕಂಡು ಬರುತ್ತದೆ. ಇಲ್ಲಿ ಹಬೆನರಿಯ ಪಂಗಡಕ್ಕೆ ಸೇರಿದ 17 ಪ್ರಭೇದದ ಆರ್ಕಿಡ್ ಗಳನ್ನು ಕಾಣಬಹುದು. ಹೂ ಬಿಡುವ ಕಾಲದಲ್ಲಂತೂ ಹುಲ್ಲುಗಾವಲಿನ ಬೆಟ್ಟ ಪ್ರದೇಶದಲ್ಲಿ ನೂರಾರು ಹೂಗಳು ಸಾಲುಸಾಲಾಗಿ ಪೋಣಿಸಿದಂತೆ ಕಾಣುವುದು ಆನಂದ.
ಚಿತ್ರಗಳು: ಸುಮುಖ ಜಾವಗಲ್ .ಎನ್
ಮೂಲ ವಿವರಣೆ : ವಿಪಿನ್ ಬಾಳಿಗ
ಅನುವಾದ : ಶಂಕರಪ್ಪ .ಕೆ .ಪಿ