ಜಗದ ಉಸಿರು
ನಿಸರ್ಗದೆಡೆಗೆ ಪಯಣ
ಕಾಡಿನಿಂದ ನಾಡಿಗೆಲ್ಲ
ಬರದು ಬರದ ಛಾಯೆ
ಕಾಡಿನಲ್ಲಿ ಜಗವು ಹಲವು
ಕಂಡು ಕಾಣದಿಹ ಮಾಯೆ…
ಹಣ್ಣು ಕಾಯಿ ಹೂ ಗಿಡಗಳು
ಮರಗಳೆನಿತು ಪೇಳಲಿ
ಜಿಂಕೆ ಮೊಲ ಸರೀಸೃಪಗಳು
ವನ್ಯ ಮೃಗಗಳ ಗೂಡಲಿ…
ಬಣ್ಣ ಹಸಿರು ಹೇಳಲೆನಿತು
ಕಾಡು ಜೀವ ಜಗದ ಉಸಿರು
ಸಸಿಯನೆಟ್ಟು ನಾವು ನೀವು
ನಾಳೆಗೆ ಉಳಿಸುವ ಹಸಿರು…
– ಸಂಗಮನಾಥ ಪಿ.
ಕಲ್ಬುರ್ಗಿ ಜಿಲ್ಲೆ