ಜೀವ ನದಿ
ಸರ ಸರ ಓಡುವ ನದಿಯೇ
ಎಲ್ಲಿಗೆ ನಿನ್ನಯ ಪಯಣ
ಜುಳು ಜುಳು ನಾದದಿ ಬಳುಕುತ
ನುಡಿಸುವೆ ಸಂಗೀತದ ತನನ
ಹಾಲ್ನೊರೆಯಂತೆ ಉಕ್ಕುತಾ
ರಭಸದಿ ಹರಿದು ಸಾಗುವೆ
ಬಂಡೆಯ ಇಕ್ಕೆಲಗಳಲ್ಲಿ
ಹರುಷದಿ ಕೆಳಗೆ ಧುಮುಕುವೆ
ಹರಿಯುವ ಮಾರ್ಗದಿ ನೀನು
ಹಸಿರ ಚಿಗುರಿಸಿ ಸಾಗುವೆ
ನಿನ್ನಯ ಸ್ಪರ್ಶದಿ ನಮಗೆ
ತಂಪಿನ ಕಚಗುಳಿ ನೀಡುವೆ
ಮನಮೋಹಕವು ನಿನ್ನಯ ಚೆಲುವು
ವರ್ಣಿಸಲು ಸಿಗಲಿಲ್ಲ ಪದಗಳ ಬಲವು
ನೋಡಲು ನನ್ನೊಳಗೆ ಖುಷಿಯು ಹಲವು
ನಿತ್ಯ ರಮಣೀಯ ನೀ ನನಗೆ ಪ್ರತಿಸಲವು
-ಜನಾರ್ಧನ್ ಎಂ. ಎನ್.
ಭಟ್ಕಳ, ಉತ್ತರ ಕನ್ನಡ ಜಿಲ್ಲೆ