ನೀಲಿ ಹುಳುಗುಳುಕ
ನೀಲಿ ಸುಂದರಿ
ಕಪ್ಪು ಕಣ್ಣು, ಕೊಕ್ಕು
ಕಾಲು ಬೆರಳು
ನಿಬಿಡ ತೊರೆದಡ
ಹಸುರ ಕಾನನದಿ
ಮಲೆ-ಅರೆಮಲೆನಾಡಲ್ಲಿ ಇರುವೆ
ಕೊಂಬೆ ಕಡ್ಡಿಗಳ ಮೇಲೆ
ನೆಟ್ಟಗೆ ಕೂರುವ ನೀರೆ
ಕೀಟ, ಹುಳು ತಿಂದು
ವಸಂತದಲಿ ಮೊಟ್ಟೆ ಮರಿ ಮಾಡಿ
ಗುಬ್ಬಚ್ಚಿಯಂತಿರುವೆಯಲ್ಲಾ…
ನಲ್ಲನೆಲ್ಲಿ?
ದೂರ ಬಿಟ್ಟು ಒಂಟಿಯಾಗಿರುವೆಯಾ?
ಹಸುರ ಕಾನಿನ ನಡುವೆ
ನಿನ್ನೆದೆಯ ದನಿ ಕೇಳುವುದು
ಜರಿ ಹರಿಯುವುದು
ಚೀಪ್…ಚೀ..ಚೀ..
ಸಿಳ್ಳಿಗೆ ದೂರದಲ್ಲಿ
ಮತ್ತೊಂದು ಸಿಳ್ಳು!
ನೀಲಿ ಸುಂದರಿ
ಈ ನಮ್ಮ ಲೋಕವನ್ನು
ಸಿಂಗರಿಸಿದ ನೀನೊಂದು
ಹಣಿಮುತ್ತು.
–ರಾಮಾಂಜಿನಯ್ಯ ವಿ
ಕೋಲಾರ ಜಿಲ್ಲೆ