ನೀವೂ ಕಾನನಕ್ಕೆ ಬರೆಯಬಹುದು
ನಾವು, ದಿನ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡಿದರೆ ಎಷ್ಟೊ೦ದು ಬಗೆಯ ಪಕ್ಷಿಗಳನ್ನು ಕಾಣಬಹುದು. ಆದರೆ ಕೆಲವೊಮ್ಮೆ ಆ ಪ್ರದೇಶದಲ್ಲಿ ಸಾಮಾನ್ಯವಾಗಿ ನೋಡದೆ ಇರುವ ಪಕ್ಷಿಗಳು ಕಾಣಸಿಗುತ್ತವೆ. ಆಗ ನಮಗೆ ನಿಜವಾಗಿಯೂ ಆಶ್ಚರ್ಯವೆನಿಸುತ್ತದೆ. ಏಕೆ೦ದರೆ ಇದುವರೆಗೂ ಕಾಣಸಿಗದ ಪಕ್ಷಿಗಳು, ಅದು ಹೇಗೆ? ಈಗ ಮಾತ್ರ ನೋಡಲು ಸಿಗುತ್ತದೆ!. ಆಮೇಲೆ ಸ್ವಲ್ಪ ದಿನಗಳ ನ೦ತರ, ಆ ಪಕ್ಷಿಗಳು ಮರೀಚಿಕೆಯ೦ತೆ ಮತ್ತೆ ಕಾಣೆಯಾಗುತ್ತವೆ. ಮತ್ತೆ ಈ ಬಗೆಯ ಪಕ್ಷಿಯನ್ನು ಕಾಣಬೇಕಾದರೆ ಮು೦ದಿನ ವರ್ಷದವರೆಗೂ ತಾಳ್ಮೆಯಿ೦ದ ಕಾಯಬೇಕಾಗುತ್ತದೆ. ಇದನ್ನೆಲ್ಲ ನೋಡಿದ್ರೆ ಯಾರೋ “Black Magic” ಮಾಡ್ತ ಇರಬಹುದು ಅನ್ಸುತ್ತಲ್ವ? ಆದರೆ ವೈಜ್ಞಾನಿಕವಾಗಿ ಯೋಚಿಸಿದರೆ, ಇದಕ್ಕೆ ಕಾರಣ ಬೇರೇನೇ ಇದೆ. ಸಾಮಾನ್ಯವಾಗಿ ಪಕ್ಷಿಗಳು ಒ೦ದು ಪ್ರದೇಶದಿ೦ದ ಇನ್ನೊ೦ದು ಪ್ರದೇಶಕ್ಕೆ ವಲಸೆ ಹೋಗುತ್ತಲೆ ಇರುತ್ತವೆ. ಈ ಪಕ್ಷಿಗಳು ಯಾಕೆ ಸುಮ್ಮನೆ ವಲಸೆ ಹೋಗಬೇಕು? ಯಾವಾಗ ಪಕ್ಷಿಗಳ ವಾಸ ಸ್ಥಾನಗಳಲ್ಲಿ ಆಹಾರ ಕೊರತೆ ಎದುರಾಗುತ್ತದೋ, ವಾತವರಣ ಬದಲಾಗುತ್ತದೋ ಹಾಗು ಪರಭಕ್ಷಕ ಪ್ರಾಣಿಗಳಿ೦ದ ಪಾರಾಗಲು ಪಕ್ಷಿಗಳು ವಲಸೆ ಹೋಗುತ್ತವೆ. ಇವುಗಳಲ್ಲದೆ ಮೊಟ್ಟೆಯಿಟ್ಟು ಮರಿಮಾಡಲು ಯಾವ ಜಾಗ ಸೂಕ್ತವೆನಿಸುತ್ತದೋ ಅಲ್ಲಿಗೆ ವಲಸೆ ಹೋಗುತ್ತವೆ. ಆದರೆ ಈ ಪಕ್ಷಿಗಳು ವಲಸೆ ಹೋಗುವ ಪ್ರದೇಶಗಳಾದ ಕೆರೆ, ತೊರೆ, ನದಿ, ಹಳ್ಳ, ಕುಂಟೆ, ಕುರುಚಲು ಕಾಡು, ಹುಲ್ಲುಗಾವಲು, ದಟ್ಟಾರಣ್ಯಗಳಂತಹ ಆವಾಸಗಳನ್ನು ಮನುಷ್ಯ ಹಾಳು ಮಾಡುತ್ತಿದ್ದಾನೆ. ಈ ತರಹದ ಪ್ರದೇಶಗಳನ್ನು ನಾವು ಉಳಿಸಿಕೊಳ್ಳಲು ಮತ್ತು ಸಂರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಹಾಗು ಪಕ್ಷಿಗಳು ವಲಸೆ ಹೋಗುವಾಗ ಎಷ್ಟೊ೦ದು ಪ್ರಾಣ ಸ೦ಕಟ ತರುವ ಪರಿಸ್ಥಿತಿಗಳು ಎದುರಾಗುತ್ತವೆ. ವಲಸೆ ಹೋಗುವ ಪಕ್ಷಿಗಳಿಗೆ ಈ ತರಹದ ತೊ೦ದರೆಗಳು ಉ೦ಟಾಗಬಾರದೆ೦ದು, ಮಾನವರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮೇ ತಿ೦ಗಳ ಎರಡನೇ ಶನಿವಾರದ೦ದು “World Migratory Bird Day” ಎ೦ದು ಆಚರಿಸಲಾಗುತ್ತದೆ. ಈ ರೀತಿಯ ಇವುಗಳ ಸಂರಕ್ಷಣೆಯಲ್ಲಿ ನಿಮ್ಮದೊಂದು ಪುಟ್ಟ ಅಳಿಲು ಸೇವೆ ಮಾಡಲು ಇಚ್ಛಿಸಿದಲ್ಲಿ ದಯವಿಟ್ಟು ಕಾನನ ಪತ್ರಿಕೆಗೆ ಇದಕ್ಕೆ ಸಂಬಂಧ ಪಟ್ಟ ಲೇಖನಗಳನ್ನು ಬರೆಯಬಹುದು. ಹಾಗೆಯೇ ಈ ಮೇ ತಿಂಗಳ ಸಂಚಿಕೆಗೆ ಜೀವ ವೈವಿಧ್ಯತೆ ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಾಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಆಹ್ವಾನಿಸಲಾಗಿದೆ. ಇ-ಮೇಲ್ ಅಥವಾ ಪೋಸ್ಟ್ ಮೂಲಕ ಕಳಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.