ಅನ್ನದಾತ-ಪ್ರಾಣದಾತ
ಅನ್ನದಾತನಿವನು ಪುಣ್ಯದಾತಾನು
ಮಳೆ ಬಿಸಿಲೆಂಬದೆ ದುಡಿಯುವನು
ಭೂ ತಾಯಿ ಒಡಲ ತುಂಬಿಸುವವನು
ಚಿನ್ನದಂತಹ ಬೆಳೆ ಬೆಳೆಯುವವನು.
ಮೋಜು ನಾಜೂಕು ತಿಳಿಯದವನು
ತನ್ನ ತನವನೆಂದೂ ಬಿಡದವನಿವನು
ಇತರರ ಮುಂದೆ ತಲೆಬಾಗದವನು
ದರ್ಪವ ತೋರನು ದುಡಿವವನೆಂದು
ಎಲ್ಲರೂ ಕೂಗಿ ಹೇಳುತಿಹರಿಂದು
ಈತನೇ ದೇಶದ ಬೆನ್ನೆಲುಬೆಂದು
ಸಾಲದ ಸುಳಿಯಲಿ ನಿಲುಕಿರುವನಿಂದು
ತನ್ನ ಪ್ರಾಣದ ತೆರುತಿಹನಿಂದು
ಸಾಲದ ಶೂಲಕೆ ಅಂಜದಿರೆಂದು
ಲಾಭ ನಷ್ಟವ ಎಣಿಸದವನೆಂದೂ
ಜೊತೆಗಿರುವೆವು ನಾವೆಲ್ಲರಿಂದು
ಕೆಟ್ಟಯೋಚನೆ ಮಾಡದಿರೆಂದೂ
ಹೆಂಡತಿ ಮಕ್ಕಳ ತೊರೆಯದಿರೆಂದೂ
ಅವರೂ ನಿನ್ನನೇ ನಂಬಿಹರಿಂದು
ಸಾವಿನ ಕಡೆಗೆ ಮನ ಕೊಡದಿರೆಂದೂ
ನಂಬಿದ ಜನರ ಕೈ ಬಿಡದಿರೆಂದೂ.
–ಬಸವರಾಜ್ ಜಿ. ಆರ್.
ಚಿತ್ರದುರ್ಗ ಜಿಲ್ಲೆ