ಕಾನನ
© ಹೂರ್ ಬಾನು
ಮೈ ಮನಸ್ಸಿಗೆ ಮುದ ನೀಡುವ ಕಾನನ
ಕ್ರಿಮಿಕೀಟ ಮೃಗಾದಿಗಳ ತಾಣ
ಮೊಗೆದಷ್ಟೂ ರಸಾನುಭವೀವ ರಸದೌತಣ
ಅನೇಕ ಬುಡಕಟ್ಟು ಜನಾಂಗದ ಉಗ್ರಾಣ
ರವಿಯೇ ಇಲ್ಲಿನ ಬೆಳಕು
ಗಿಡಮೂಲಿಕೆಗಳೇ ಔಷಧ ಸಕಲಕ್ಕೂ
ಕಾನನ ಪ್ರತಿ ಕ್ಷಣ ಬದಲಾಗುವ ಜೀವ ಸಂಘರ್ಷ
ಒಂದನ್ನೊಂದು ಅವಲಂಬಿಸಿದ ಜೀವನ ಆದರ್ಶ
ವನದೈವಗಳೇ ಕಾನನ ಕಾಯುವ ಸರ್ವಶಕ್ತಿ
ಅಗೋಚರ ವಿಷಯಗಳೇ ಹೆಚ್ಚಿಸಿವೆ ತಿಳಿವ ಆಸಕ್ತಿ
ಕನ್ನಡ ನೆಲ ಅನೇಕ ಅಭಯಾರಣ್ಯಗಳ ಬೀಡು
ಇದ ಉಳಿಸಿ ಬೆಳೆಸಲು ಒಂದು ಪ್ರಯತ್ನ ಪಡು
ಸಕಲ ಸಹೃದಯಗಳು ನಿನ್ನ ಹಾರೈಸುತ್ತವೆ ನೋಡು
– ಸೌಭಾಗ್ಯತನಯ ಕೇಶವ
ತುಮಕೂರು ಜಿಲ್ಲೆ