ನೆಲದನಿ
© ಹೂರ್ ಬಾನು
ಈ ಜಗದಿ ಹಸಿರು
ಜೀವ ಜಗದ ಉಸಿರು
ಮಳೆ ಮೋಡದ ಓಟ
ಕಣ್ಣ ಸವಿಗೆ ನೋಟ
ಗುಡ್ಡ ಬೆಟ್ಟ ಕಾನು
ಸುತ್ತ ಹಾರುವ ಜೇನು
ಹರಿವ ನೀರ ಝರಿ
ಮನಸ ತುಂಬಾ ಲಹರಿ
ಮಣ್ಣು ಹಸಿರಿನ ಆಸರೆ
ಬೇರು ನೆಲೆಯ ಕಂಡಿರೆ
ಸಸಿಯ ಸೊಬಗು ತುಂಬಿದೆ
ಅನ್ನದ ಉಸಿರ ಕಾದಿವೆ
ಹೊಸ ಮೋಡದ ಹನಿಗೆ
ಸಂತಸ ಕಾಣುವ ಕಣ್ಣಿಗೆ
ಹೂವದು ಚೆಂದ ಹಗಲಿಗೆ
ಬುವಿಯದು ಅಂದ ನಗುವಿಗೆ
ಹಕ್ಕಿ ಹಾಡಿನ ಉಳಿವು
ಹಸಿರು ಸಾರಿದ ಒಲವು
ಬೆಳಕು ಕಾಣುವ ಜಗವಿದು
ನೆಲದನಿ ಸಿರಿಯ ಹಾಡಿದು.
– ನಾಗರಾಜ ಬಿ. ನಾಯ್ಕ
ಉತ್ತರ ಕನ್ನಡ ಜಿಲ್ಲೆ
ನಾಗರಾಜ್ ನಾಯ್ಕರ ಕವನ ಮಧುರ ಭಾವಗಳು ಶಬ್ದದೊಳಗೆ ಅಡಗಿಕೊಂಡಿವೆ.